FILM
ಹನುಮಂತು ವಿರುದ್ದ ತಿರುಗಿ ಬಿದ್ದ ಚೈತ್ರಾ ಕುಂದಾಪುರ..!!
ಬೆಂಗಳೂರು ನವೆಂಬರ್ 05:ಬಿಗ್ ಬಾಸ್ ಸೀಸನ್ 11 ರಲ್ಲಿ ಎರಡನೇ ಬಾರಿ ಕ್ಯಾಪ್ಟನ್ ಆಗಿರುವ ಹನುಮಂತು ವಿರುದ್ದ ಚೈತ್ರಾ ಕುಂದಾಪುರ ಗರಂ ಆಗಿದ್ದು, ವೋಟ್ ಕೊಟ್ಟ ಜನರಿಗೆ ಯಾವ ನಿಯತ್ತಿನ ಬಗ್ಗೆ ಉತ್ತರ ಕೊಡುತ್ತೀರಿ ನಾನು ನೋಡ್ತೀನಿ. ಜನ ನೋಡ್ತಾರೆ ಈ ನಿಯತ್ತನ್ನು ಎಂದು ಚೈತ್ರಾ ಹನುಮಂತು ಮೇಲೆ ರೇಗಾಡಿದ್ದಾರೆ.
ಬಿಗ್ ಬಾಸ್ ಸೀಸನ್ 11 ರಲ್ಲಿ ಎರಡನೇ ಬಾರಿ ನಾಯಕನಾಗಿರುವ ಹನುಮಂತು ವಿರುದ್ದ ಇದೀಗ ಮನೆಯಲ್ಲಿ ಆಕ್ರೋಶ ಹೆಚ್ಚಾಗಿದೆ. ಬಿಗ್ ಬಾಸ್ ಮನೆಯಲ್ಲಿ ನಿಯತ್ತಿನ ಪ್ರಶ್ನೆ ಎದ್ದಿದೆ. ಕ್ಯಾಪ್ಟನ್ ಹನುಮಂತು ಮೇಲೆ ಸಹ ಸ್ಪರ್ಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೀಗ ರಿಲೀಸ್ ಆಗಿರುವ ಪ್ರೋಮೊದಲ್ಲಿ ಹನುಮಂತು ವಿರುದ್ದ ಚೈತ್ರಾ ಕುಂದಾಪುರ ಗರಂ ಆಗಿದ್ದಾರೆ. ಟಾಸ್ಕ್ ಒಂದರಲ್ಲಿ ನಮ್ಮನ್ನು ಸೋಲಿಸೋಕೆ ಎರಡೆರಡು ತಂಡಗಳು ಒಟ್ಟಾಗುತ್ತಿದೆ ಎಂದು ಚೈತ್ರಾ ಹೇಳಿದ್ದು, ಈ ತರ ಆಟ ಆಡೋಕೆ ಆಟಗಳು ಆಡಬೇಕಾ ಎಂದು ಗೌತಮಿ ಗರಂ ಆಗಿದ್ದಾರೆ.
ಹಳದಿ ಕಲರ್ ತಂಡದವವರು ಗೆದ್ದಿದ್ದಾರೆ ಎಂದು ಕ್ಯಾಪ್ಟನ್ ಹನುಮಂತು ಅನೌನ್ಸ್ ಮಾಡಿದ್ದಾರೆ. ಹನುಮಂತಣ್ಣ ನಿಮ್ ಕ್ಯಾಪ್ಟನ್ಸಿ ಅಲ್ಲೇ ಈ ನಿಯತ್ತು ನೋಡಬೇಕಾಗಿತ್ತು ನಾನು. ವೋಟ್ ಕೊಟ್ಟ ಜನರಿಗೆ ಯಾವ ನಿಯತ್ತಿನ ಬಗ್ಗೆ ಉತ್ತರ ಕೊಡುತ್ತೀರಿ ನಾನು ನೋಡ್ತೀನಿ. ಜನ ನೋಡ್ತಾರೆ ಈ ನಿಯತ್ತನ್ನು ಎಂದು ಚೈತ್ರಾ ಹನುಮಂತು ಮೇಲೆ ರೇಗಾಡಿದ್ದಾರೆ.
ಬಂಡಾಯ ಎದ್ರು ಚೈತ್ರಾ, ಹನುಮಂತುಗೆ ತಡೆಯೋಕ್ಕಾಗುತ್ತಾ ಈ ಹೊಡೆತ?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/MRE9zrlry2
— Colors Kannada (@ColorsKannada) November 5, 2024