LATEST NEWS
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಗಲಾಟೆ ಬಗ್ಗೆ ಸ್ಪಷ್ಟನೆ ನೀಡಿದ ಚೈತ್ರಾ ಕುಂದಾಪುರ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಗಲಾಟೆ ಬಗ್ಗೆ ಸ್ಪಷ್ಟನೆ ನೀಡಿದ ಚೈತ್ರಾ ಕುಂದಾಪುರ
ಮಂಗಳೂರು ಅಕ್ಟೋಬರ್ 26: ಬುಧವಾರದಂದು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ವಿಡಿಯೋ ಕಳುಹಿಸಿರುವ ಅವರು ಹಲ್ಲೆಗೆ ಕಾರಣಗಳನ್ನು ನೀಡಿದ್ದಾರೆ. ಹಲ್ಲೆಗೊಳಗಾದ ಗುರುಪ್ರಸಾದ್ ಪಂಜ ಹಾಗೂ ಆಶಿತ್ ಕಲ್ಲಾಜೆ ಎನ್ನುವ ವ್ಯಕ್ತಿಗಳು ಫೇಸ್ಬುಕ್ ನಲ್ಲಿ ತನ್ನ ಬಗ್ಗೆ ಕೆಟ್ಟ ರೀತಿಯ ಕಮೆಂಟ್ ಗಳನ್ನು ಹಾಕಿದ್ದಾರೆ. ಆದರೆ ತಾನು ಈ ಬಗ್ಗೆ ಯಾವುದೇ ತಕರಾರು ಎತ್ತಿಲ್ಲ ಎಂದಿದ್ದಾರೆ.

ಬುಧವಾರದಂದು ಸಂಪುಟ ನರಸಿಂಹ ಮಠಕ್ಕೆ ಬಂದ ಸಂದರ್ಭದಲ್ಲಿ ಗುರುಪ್ರಸಾದ್ ಪಂಜ ಹಾಗೂ ಆತನ ಸಹಚರರು ನಮ್ಮ ಕಾರಿನ ಗ್ಲಾಸ್ ಗಳನ್ನು ಒಡೆಯಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಕಾರಿನಿಂದ ಇಳಿದಾಗ ಗುರು ಪ್ರಸಾದ್ ತನ್ನ ಮೇಲೆ ಹಲ್ಲೆ ಮಾಡಿದ್ದು, ಸ್ವ ರಕ್ಷಣೆಗಾಗಿ ತಾನು ಆತನನ್ನು ಹಿಂದಕ್ಕೆ ತಳ್ಳಿರುವುದಾಗಿ ಹೇಳಿದ್ದಾರೆ.
ಗುರು ಪ್ರಸಾದ್ ಒರ್ವ ರೌಡಿ ಶೀಟರ್ ಎಂದು ಗೊತ್ತಿರುವ ತಾನು ಯಾವುದೇ ಕಾರಣಕ್ಕೂ ಆತನ ಬಳಿ ಹಲ್ಲೆಗಾಗಿ ಹೋಗುವುದಿಲ್ಲ ಎಂದು ಸ್ಪಷ್ಟನೆಯನ್ನೂ ಅವರು ನೋಡಿದ್ದಾರೆ.