LATEST NEWS
ಕೆಲವೇ ಗಂಟೆಗಳಲ್ಲಿ ಇಡೀ ಸೆಂಟ್ರಲ್ ಮಾರ್ಕೆಟ್ ಖಾಲಿ….ತರಕಾರಿಗಾಗಿ ಮುಗಿಬಿದ್ದ ಜನ
ಕೆಲವೇ ಗಂಟೆಗಳಲ್ಲಿ ಇಡೀ ಸೆಂಟ್ರಲ್ ಮಾರ್ಕೆಟ್ ಖಾಲಿ….ತರಕಾರಿಗಾಗಿ ಮುಗಿಬಿದ್ದ ಜನ
ಮಂಗಳೂರು ಮಾರ್ಚ್ 31: ಕಳೆದ ಮೂರು ದಿನಗಳಿಂದ ಸಂಪೂರ್ಣ ಬಂದ್ ಆಗಿದ್ದ ಕರಾವಳಿ ಜನತೆಗೆ ಇಂದು ಬೆಳಿಗ್ಗೆ 6 ರಿಂದ ಅಪರಾಹ್ನ 3 ರವರೆಗೆ ಲಾಕ್ ಡೌನ್ ನ್ನು ಕೊಂಚ ಸಡಿಲಿಸಲಾಗಿದ್ದು, ಅಗತ್ಯವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದರು.
ಬೆಳಿಗ್ಗೆ 6 ಗಂಟೆಯಿಂದ ಲಾಕ್ ಡೌನ್ ಸಡಿಲಿಕೆ ಅಂದರೂ ಜನರು ಇಂದು 3 ಗಂಟೆಯಿಂದಲೆ ದಿನಸಿ ಅಂಗಡಿ, ಮೆಡಿಕಲ್, ಪೆಟ್ರೋಲ್ ಪಂಪ್‌ಗಳಿಗೆ ಮುಗಿ ಬಿದ್ದಿದ್ದಾರೆ. ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರವಾದ ಸೆಂಟ್ರಲ್ ಮಾರುಕಟ್ಟೆಗೆ ಸುಮಾರು 8 ಟ್ರಕ್ ಗಳಲ್ಲಿ ತರಕಾರಿ, ಹಣ್ಣು ಹಂಪಲು ಗಳು ಬಂದಿದ್ದು ಕೋಮಡುಕೊಳ್ಳಲು ಜನ ಮುಗಿದುಬಿದ್ದರು.
ಮೂರೇ ಗಂಟೆಗಳಲ್ಲಿ ಬಹುತೇಕ ವಸ್ತುಗಳು ಖಾಲಿಯಾಗಿದ್ದುವು. ಒಂದು ಮನೆಯಿಂದ ಒಬ್ಬನೇ ಖರೀದಿ ಮಾಡಲು ಬರಬೇಕು ಮತ್ತು ಖರೀದಿ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಜಿಲ್ಲಾಡಳಿತ ಸೂಚನೆಯನ್ನು ನೀಡಿತ್ತು ಆದರೂ ಜನ ಸಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದರು. ಎಲ್ಲಾ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಕೊಂಡುಕೊಳ್ಳುವಿಕೆ ಸುಗಮವಾಗಿ ನಡೆಯಲು ಅನುಕೂಲವಾಗಲು ಪೋಲಿಸ್ ವ್ಯವಸ್ಥೆಯನ್ನು ಮಾಡಲಾಗಿದ್ದರೂ ಅವರು ಮೂಕ ಪ್ರೇಕ್ಷಕರಾಗಿದ್ದರು.
ಇನ್ನು ನಗರದ ಕದ್ರಿ, ಕಂಕನಾಡಿ, ಉರ್ವಾ ಮಾರುಕಟ್ಟೆಗಳು, ಮಾಂಸದಂಗಡಿಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದುವು. ಉದ್ದುದ್ದ ಸರತಿ ಸಾಲುಗಳಲ್ಲಿ ಜನ ತಮ್ಮ ಅಗತ್ಯ ವಸ್ತುಗಳ ಖರೀದಿಗೆ ಕ್ಯೂ ನಿಂತಿದ್ದರು. ಕೆಲವೆಡೆ ಹಿರಿಯರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು, ಧ್ವನಿ ವರ್ದಕಗಳ ಮೂಲಕ ಜಾಗೃತೆಯ ಸಂದೇಶ ಬಿತ್ತರಿಸಲಾಗುತ್ತಿತ್ತು. ಆದರೆ ಎಲ್ಲಿಯೂ ಕೋರೋನಾ ಸೊಂಕು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಜಿಲ್ಲಾಡಳಿತದ ಎಚ್ಚರಿಕೆಯನ್ನು ನಾಗರಿಕರು ಪಾಲಿಸಿಕೊಂಡಂತೆ ಕಂಡು ಬರಲಿಲ್ಲ.