Connect with us

  DAKSHINA KANNADA

  ಕೇಂದ್ರ ಸರಕಾರವು ಉತ್ಕೃಷ್ಠವಾದ ಸುಧಾರಣೆಗಳನ್ನು ಮತ್ತು ಅಭಿವೃದ್ಧಿಯನ್ನು ಜ್ಞಾನಕ್ಷೇತ್ರಕ್ಕೆ ನೀಡಿದೆ: ಡಾ.ಅಶ್ವಥ್ ನಾರಾಯಣ್

  ಸುಬ್ರಹ್ಮಣ್ಯ, ಮಾರ್ಚ್ 07: ಶತಮಾನದಲ್ಲಿ ಜ್ಞಾನಾಭಿವೃದ್ಧಿಗೆ ಒತ್ತು ನೀಡುವ ಕಾರ್ಯವನ್ನು ನಮ್ಮ ಕೇಂದ್ರ ಸರಕಾರ ಮಾಡುತ್ತಿದೆ.ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಉತ್ಕೃಷ್ಠವಾದ ಸುಧಾರಣೆಗಳನ್ನು ಮತ್ತು ಅಭಿವೃದ್ಧಿಯನ್ನು ಜ್ಞಾನಕ್ಷೇತ್ರಕ್ಕೆ ನೀಡಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖಾ ಸಚಿವ ಡಾ.ಅಶ್ವಥ್ ನಾರಾಯಣ್ ಸಿ.ಎನ್ ಹೇಳಿದರು.

  ಪ್ರಧಾನಮಂತ್ರಿ ಮೋದಿಜಿ ಅವರ ನಾಯಕತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆ ಆಗಿದೆ.ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ ಮೂಲಕ ಶಿಕ್ಷಣ ಕ್ಷೇತ್ರ ಮತ್ತು ದೇಶದ ಜ್ಞಾನಾರ್ಜನೆಯ ಮಟ್ಟವು ಉತ್ಕೃಷ್ಠವಾಗುವಂತೆ ಪ್ರಧಾನಿಗಳು ಮಾಡಿದರು.ಇದನ್ನು ದೇಶದಲ್ಲೇ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನ ಮಾಡಿದ್ದೇವೆ. ದೇಶದ ಸರ್ವರೂ ಅತ್ಯಾಧುನಿಕ ರೀತಿಯ ಶಿಕ್ಷಣ ಪಡೆಯಲು ಈ ಯೋಜನೆ ಬೆನ್ನೆಲುಬಾಗಿದೆ.

  ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಸುಧಾರಣೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ಈ ಯೋಜನೆ ಪೂರಕವಾಗಿದೆ.ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಮೂಲಕ ನಮ್ಮ ಕರ್ನಾಟಕವು ತಂತ್ರಜ್ಞಾನ, ಅವಿಷ್ಕಾರ, ಸಂಶೋಧನೆ, ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವಂತೆ ಆಗಿದೆ.ವಿಶ್ವ ಮಟ್ಟದಲೂ ರಾಜ್ಯ ಗುರುತಿಸಿಕೊಳ್ಳುವಲ್ಲಿ ಈ ಯೋಜನೆ ಜಾರಿಗೊಳಿಸಿರುವುದು ಸಹಕಾರಿಯಾಗಿದೆ.

  ದಕ್ಷಿಣ ಭಾರತದ ಶ್ರೇಷ್ಠ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರಿಗೆ ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಯುವಕರ ಪ್ರತಿಭೆ ಅನಾವರಣಗೊಳ್ಳಲು ಈ ಯೋಜನೆ ಶ್ರೇಷ್ಠವಾದ ಸಹಕಾರ ನೀಡಿದೆ.ದೇಶದ ಸಂಪತ್ತಾದ ಯುವಕರು ಅತ್ಯಾಧುನಿಕ ತಂತ್ರಜ್ಞಾನದ ಶಿಕ್ಷಣ ಪಡೆದು ಪ್ರಗತಿ ಸಾಧಿಸಲು ಈ ಯೋಜನೆ ಸಹಕಾರವಾಗಿದೆ.ಸಮಾಜದ ಸರ್ವರೂ ಗುಣಮಟ್ಟದ ಶಿಕ್ಷಣ ಪಡೆಯಲು ಈ ಯೋಜನೆ ಬೆನ್ನೆಲುಬಾಗಿದೆ.ಈ ಯೋಜನೆ ಮೂಲಕ ಸರ್ವರಿಗೂ ಸಮಾನ ಶಿಕ್ಷಣ ದೊರಕುವಂತಾಗಿದೆ ಎಂದು ಉಪಮುಖ್ಯಮಂತ್ರಿಗಳು ನುಡಿದರು.
  ಅವರು ತಿಳಿಸಿದರು.

  ಸರ್ವರಿಗೂ ಕೌಶಲ್ಯ ಎಂಬ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬರಿಗೂ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತಿದೆ.ಪದವಿ ಸೇರಿದಂತೆ ಇತರ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಮತ್ತು ಕೆಲಸ ಕಾರ್ಯಗಳಿಗೆ ತೆರಳುವವರು ಮತ್ತು ಇತರರು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕೌಶಲ್ಯತೆ ಪಡೆಯಲು ಈ ಯೋಜನೆ ತರಬೇತಿ ನೀಡುತ್ತಿದೆ.

  ಇದರಿಂದ ಯುವ ಸಂಪತ್ತು ಕಲಿಕೆಯೊಂದಿಗೆ ಕೌಶಲ್ಯ ತರಬೇತಿ ಪಡೆದು ಸ್ವಉದ್ಯೋಗ ಮಾಡಿ ಬದುಕಿನಲ್ಲಿ ಪ್ರಗತಿ ಸಾಧಿಸಲು ಪೂರಕವಾಗುತ್ತದೆ.ಡಿಜಿಟಲ್ ಸಾಕ್ಷರತೆ, ಕಂಪ್ಯೂಟರ್ ಸಾಕ್ಷರತೆ ಕಡ್ಡಾಯ ಮಾಡಿ ಸರ್ವರೂ ಆಧುನಿಕ ಯುಗದಲ್ಲಿ ತಂತ್ರಜ್ಞಾನಯುಕ್ತ ಅತ್ಯಾಧುನಿಕ ಕೌಶಲ್ಯ ಪಡೆಯಲು ಸರಕಾರವು ವ್ಯವಸ್ಥಿತ ಯೋಜನೆ ಮಾಡಿದೆ.ಸರ್ವರಿಗೂ ಕೌಶಲ್ಯಯುಕ್ತ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ.ಲಕ್ಷಾಂತರ ಮಂದಿ ಇದರ ಸದುಪಯೋಗ ಪಡೆದುಕೊಂಡು ತಮ್ಮ ಬದುಕಿನಲ್ಲಿ ಸ್ವ ಉದ್ಯೋಗ ಸೇರಿದಂತೆ ಉದ್ಯೋಗ ಪಡೆದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ ಈ ನಿಟ್ಟಿನಲ್ಲಿ ಅನೇಕ ತರಬೇತಿ ಕೇಂದ್ರಗಳನ್ನು ರಾಜ್ಯಾಧ್ಯಂತ ಸ್ಥಾಪಿಸಲಾಗಿದೆ ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply