LATEST NEWS
ಪದ್ಮಾವತಿ ಅಲ್ಲ ಪದ್ಮಾವತ್..! UA ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ನಿರ್ಧಾರ
ಪದ್ಮಾವತಿ ಅಲ್ಲ ಪದ್ಮಾವತ್..! UA ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ನಿರ್ಧಾರ
ನವದೆಹಲಿ, ಡಿಸೆಂಬರ್ 31 : ದೇಶದಾದ್ಯಂತ ಪರ–ವಿರೋಧ ಚರ್ಚೆ ಹುಟ್ಟುಹಾಕಿದ್ದ, ಲೀಲಾ ಬನ್ಸಾಲಿ ಅವರ ‘ಪದ್ಮಾವತಿ’ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ– ಸೆನ್ಸಾರ್ ಮಂಡಳಿ) ‘ಯುಎ’ ಪ್ರಮಾಣಪತ್ರ ನೀಡಲು ನಿರ್ಧರಿಸಿದೆ.
ಆದರೆ ಚಲನಚಿತ್ರದ ಯಾವುದೇ ಭಾಗಕ್ಕೆ ಕತ್ತರಿ ಹಾಕಲು ಅದು ಸೂಚಿಸಿಲ್ಲ. ಚಿತ್ರದ ಹೆಸರನ್ನು ಮಾತ್ರ ‘ಪದ್ಮಾವತ್’ ಎಂದು ಬದಲಾಯಿಸುವಂತೆ ಸೆನ್ಸಾರ್ ಮಂಡಳಿಯು ನಿರ್ದೇಶಕರಿಗೆ ಸೂಚಿಸಿದೆ.
ಜೊತೆಗೆ ಚಲನ ಚಿತ್ರದಲ್ಲಿ ಇತರ ನಾಲ್ಕು ಮಾರ್ಪಾಡುಗಳನ್ನು ಮಾಡುವಂತೆಯೂ ನಿರ್ದೇಶಿಸಿದೆ.
ಈ ಬಗ್ಗೆ ಪ್ರತಿಕ್ರೀಯಿಸಿರುವ ಸೆನ್ಸಾರ್ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಷಿ ಅವರು ‘ಚಿತ್ರದ ಹೆಸರು ಬದಲಾವಣೆ ಸೇರಿ ಕೇವಲ ಐದು ಬದಲಾವಣೆಗಳನ್ನು ಮಾತ್ರ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.
ಪ್ರಸ್ತಾವಿತ ಬದಲಾವಣೆಗಳಿಗೆ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ಸಂಪೂರ್ಣವಾಗಿ ಒಪ್ಪಿದ್ದಾರೆ.ಇದೊಂದು ಅಸಾಮಾನ್ಯ ಮತ್ತು ಅತ್ಯಂತ ಕಷ್ಟದ ಪರಿಸ್ಥಿತಿ.
ಸಮತೋಲನದ ನಡೆಯಿಂದಾಗಿ ಸಕಾರಾತ್ಮಕವಾಗಿ ಇದನ್ನು ಪರಿಹರಿಸಲು ಸಾಧ್ಯವಾಯಿತು ಎಂದೂ ಜೋಷಿ ಹೇಳಿದ್ದಾರೆ
ಹಕ್ಕು ನಿರಾಕರಣೆ ಹೇಳಿಕೆಗಳಲ್ಲೂ (ಡಿಸ್‌ಕ್ಲೇಮರ್) ಕೆಲವು ಬದಲಾವಣೆಗಳಿಗೆ ಮಂಡಳಿ ಸಲಹೆ ನೀಡಿದೆ. ಚಿತ್ರದಲ್ಲಿ ‘ಸತಿ’ ಪದ್ಧತಿಯನ್ನು ವೈಭವೀಕರಿಸಲಾಗಿಲ್ಲ ಎಂಬುದನ್ನು ನಮೂದಿಸುವಂತೆ ನಿರ್ದೇಶನ ನೀಡಿದೆ.
ಜೊತೆಗೆ, ಬಿಂಬಿಸಲಾಗಿರುವ ಪಾತ್ರಕ್ಕೆ ಸರಿಹೊಂದುವ ರೀತಿಯಲ್ಲಿ ‘ಘೂಮರ್’ ಹಾಡಿನಲ್ಲೂ ಅಗತ್ಯವಾದ ಮಾರ್ಪಾಡುಗಳಿಗೆ ಸಲಹೆ ನೀಡಿದೆ.
ಮಂಡಳಿಯ ಪರಿಶೀಲನಾ ಸಮಿತಿಯು ಡಿಸೆಂಬರ್ಸ 28 ಕ್ಕೆ ಸಭೆ ಸೇರಿತ್ತು. ಚಿತ್ರಕ್ಕೆ ಯುಎ ಪ್ರಮಾಣಪತ್ರ ನೀಡುವ ಬಗ್ಗೆ ಅಂದು ನಿರ್ಧಾರ ಕೈಗೊಳ್ಳಲಾಗಿತ್ತು.
ಇದಕ್ಕೂ ಮೊದಲು, ಬನ್ಸಾಲಿ ಅವರು ಸಂಸದೀಯ ಸಮಿತಿಯ ಮುಂದೆ ಹಾಜರಾಗಿದ್ದರು.
16ನೇ ಶತಮಾನದಲ್ಲಿ ಮಲಿಕ್ ಮೊಹಮ್ಮದ್ ಜಯಸಿ ಅವರು ರಚಿಸಿದ್ದ ‘ಪದ್ಮಾವತ್’ ಮಹಾಕಾವ್ಯ ಆಧರಿಸಿ ಈ ಚಲನಚಿತ್ರವನ್ನು ತಯಾರಿಸಲಾಗಿದೆ ಎಂದು ಹೇಳಿದ್ದರು.
. ದೇಶಾದ್ಯಂತ ಚಿತ್ರ ಹುಟ್ಟು ಹಾಕಿದ್ದ ಚರ್ಚೆಯನ್ನು ಗಮನದಲ್ಲಿರಿಸಿಕೊಂಡು ಸೆನ್ಸಾರ್ ಮಂಡಳಿಯ ಅಂತಿಮ ನಿರ್ಧಾರದ ಬಗ್ಗೆ ಅಭಿಪ್ರಾಯ ನೀಡಲು ಮೂವರು ಸದಸ್ಯರ ವಿಶೇಷ ಸಮಿತಿಯನ್ನೂ ನೇಮಕ ಮಾಡಲಾಗಿತ್ತು.
You must be logged in to post a comment Login