LATEST NEWS
ಪಲಿಮಾರು ಶ್ರೀಗಳ ಪೌರ ಸಮ್ಮಾನ ಕಾರ್ಯಕ್ರಮದಲ್ಲಿ ಮಂಗಳೂರು ಮೇಯರ್ ಗೈರು
ಪಲಿಮಾರು ಶ್ರೀಗಳ ಪೌರ ಸಮ್ಮಾನ ಕಾರ್ಯಕ್ರಮದಲ್ಲಿ ಮಂಗಳೂರು ಮೇಯರ್ ಗೈರು
ಮಂಗಳೂರು ಡಿಸೆಂಬರ್ 31: ಉಡುಪಿ ಶ್ರೀಕೃಷ್ಣ ಮಠದ ಭಾವೀ ಪ್ರಯಾಯ ಪೀಠಾಧಿಪತಿ ಪಲೀಮಾರು ಶ್ರೀ ವಿಧ್ಯಾದೀಶ ತೀರ್ಥ ಸ್ವಾಮಿಜಿ ಅವರಿಗೆ ಮಂಗಳೂರಿನಲ್ಲಿ ಪೌರ ಸಮ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಂಗಳೂರು ಜನತೆಯ ಪರವಾಗಿ ನಡೆದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಮಂಳೂರಿನ ಮಹಾಪೌರ ಮೇಯರ್ ಕವಿತಾ ಸನೀಲ್ ಗೈರು ಹಾಜರಾದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಸಚಿವ ರಮಾನಾಥ ರೈ ಅವರು ಮೇಯರ್ ಉಪಸ್ಥಿತಿ ಇರಬೇಕೆಂದು ತಿಳಿಸಿದರು.
ಮಂಗಳೂರಿನ ಜನತೆಯ ಪರವಾಗಿ ಪರ್ಯಾಯ ಪೀಠಾರೋಹಣ ಮಾಡುವ ಸ್ವಾಮಿಜಿ ಅವರಿಗೆ ಪೌರ ಸನ್ಮಾನ ಮಾಡುವ ಕಾರ್ಯಕ್ರಮ ಹಿಂದಿನಿಂದಲೂ ನಡೆದು ಬಂದಿದ್ದು, ಈ ಕಾರ್ಯಕ್ರಮ ಮಂಗಳೂರು ಮೊದಲ ಪ್ರಜೆ ಮೇಯರ್ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು, ಆದರೆ ಮಂಗಳೂರಿನಲ್ಲಿ ನಡೆದ ಪಲೀಮಾರು ಶ್ರೀಗಳ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಮೇಯರ್ ಕವಿತಾ ಸನಿಲ್ ಗೈರು ಹಾಜರಾಗುವ ಮೂಲಕ ಪೌರ ಸನ್ಮಾನ ಕಾರ್ಯಕ್ರಮಕ್ಕೆ ಅಗೌರ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಮಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾವೀ ಪರ್ಯಾಯ ಪೀಠಾಧಿಪತಿ ಪಲೀಮಾರು ಶ್ರೀ ವಿಧ್ಯಾದೀಶ ತೀರ್ಥ ಸ್ವಾಮಿಜಿ ಅವರಿಗೆ ಮಂಗಳೂರು ಜನತೆಯ ಪರವಾಗಿ ಪೌರ ಸಮ್ಮಾನ ಮಾಡಲಾಯಿತು. ಪೌರ ಸಮ್ಮಾನ ಸ್ವೀಕರಿಸಿದ ಬಳಿಕ ಶ್ರೀಗಳು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ ಪರಧರ್ಮ ಸಹಿಷ್ಣುತೆ ಹಿಂದೂ ಧರ್ಮದ ಸಾರವಾಗಿದ್ದು ಮನುಷ್ಯ ಮನುಷ್ಯರ ನಡುವೆ ನಮ್ಮವರು ಎಂಬ ಭಾವನೆ ಬಂದಾಗ ಜಗತ್ತನ್ನು ಗೆಲ್ಲಲು ಸಾದ್ಯ ಎಂದು ಹೇಳಿದರು.
ಭಾಷಣ ಆರಂಭಿಸುವುದಕ್ಕೆ ಮೊದಲು ಸಚಿವ ರಮಾನಾಥ ರೈ ಅವರು ಮೇಯರ್ ಅವರ ಗೈರು ಹಾಜರಿಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಮೇಯರ್ ಅವರನ್ನು ಪೌರ ಸಮ್ಮಾನ ಕಾರ್ಯಕ್ರಮಕ್ಕೆ ಏಕೆ ಆಹ್ವಾನಿಸಿಲ್ಲ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಜಕರು ಮೇಯರ್ ಅವರಿಗೆ 3 ಬಾರಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು , ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದ್ದರು ಎಂದು ತಿಳಿಸಿದರು. ಮೇಯರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಮೇಯರ್ ಗೈರು ಹಾಜರಾಗಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ
You must be logged in to post a comment Login