Connect with us

  FILM

  ಸಿನೆಮಾಕ್ಕಾಗಿ ಅಪ್ಪ ಮಗನ ಜೊತೆ ಮಲಗಿದ ಏಕೈಕ ನಟಿ ಈಕೆ ಎಂದ ಸಿನೆಮಾ ವಿಮರ್ಶಕ….!!

  ಮುಂಬೈ ಎಪ್ರಿಲ್ 12: ಬಾಲಿವುಡ್ ನಲ್ಲಿ ಸದಾ ವಿವಾದದಿಂದಾಗಿ ಸುದ್ದಿಯಲ್ಲಿದ್ದ ನಟಿ ಸೆಲಿನಾ ಜೇಟ್ಲಿ ವಿರುದ್ದ ಇದೀಗ ಟ್ವಿಟ್ಟರ್ ಬಳಕೆದಾರನೊಬ್ಬ ಅಸಭ್ಯವಾದ ಕಮೆಂಟ್ ಮಾಡಿದ್ದು, ಇದೀಗ ಬಿಟೌನ್ ನಲ್ಲಿ ಭಾರೀ ಆವಾಂತರ ಸೃಷ್ಟಿ ಮಾಡಿದೆ. ತಮ್ಮ ವಿಮರ್ಶೆಗಳಿಂದ ನೋಡುಗರನ್ನು ಸದಾ ದಿಕ್ಕು ತಪ್ಪಿಸುವ ಉಮೈರ್ , ಈ ಬಾರಿ ಹೆಸರಾಂತ ನಟಿ ಸೆಲಿನಾ ಜೇಟ್ಲಿ ಫರ್ದೀನ್ ಖಾನ್ ಮತ್ತು ಅವರ ತಂದೆ ಫಿರೋಜ್ ಅವರೊಂದಿಗೆ ಮಲಗಿದ ಏಕೈಕ ಬಿ-ಟೌನ್ ನಟಿ ಎಂದು ಟ್ವಿಟ್ ಮಾಡಿದ್ದಾನೆ.


  ಭಾರತೀಯ ಸಿನಿಮಾ ರಂಗ ಕಂಡ ಅತ್ಯಂತ ವಿವಾದಿತ ಸಿನಿಮಾ ವಿಮರ್ಶಕ ಬಾಲಿವುಡ್ ನ ಉಮೈರ್ ಸಂಧು ಮಾಡಿರುವ ಟ್ವೀಟ್ ಇದಾಗಿದ್ದು, ಈ ಟ್ವೀಟ್ ಅನ್ನು ಗಮನಿಸಿರುವ ಸೆಲಿನಾ, ಖಾರವಾಗಿಯೇ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ.

  ಅಕ್ಷರಗಳ ಮೂಲಕವೇ ಉಮೈರ್ ಗೆ ಚಳಿ ಬಿಡಿಸಿದ್ದಾರೆ. ಉಮೈರ್ ಬರೆದ ಟ್ವೀಟ್ ಗೆ ಉತ್ತರ ನೀಡಿರುವ ಅವರು, ‘ಡಿಯರ್ ಸಂಧು, ನಿನಗಿರುವ ಲೈಂಗಿಕ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ನಾನಾ ಮಾರ್ಗಗಳಿವೆ. ಅದಕ್ಕಾಗಿ ಬಿಡುವು ಮಾಡಿಕೊಂಡು ವೈದ್ಯರನ್ನು ಸಂಪರ್ಕಿಸು’ ಎಂದು ಮರುತ್ತರ ಕೊಟ್ಟಿದ್ದಾರೆ.


  ಬಾಲಿವುಡ್ ದಿಗ್ಗಜ ಫಿರೋಜ್ ಖಾನ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಜಾನ್ ಶೀನ್ ನಲ್ಲಿ ತಮ್ಮ ಪುತ್ರ ಫರ್ದಿನ್ ಖಾನ್ ಹಾಗೂ ನಟಿ ಸೆಲಿನಾ ಜೇಟ್ಲಿ ನಟಿಸಿದ್ದರು. ಈ ಸಿನಿಮಾ ಮೂಲಕವೇ ಸೆಲಿನಾ ಚಿತ್ರರಂಗ ಪ್ರವೇಶ ಮಾಡಿದ್ದರು. ಈ ಅವಕಾಶಕ್ಕಾಗಿ ಅವರು ತಂದೆ ಮಗನ ಜೊತೆ ಮಲಗಿದ್ದರು ಎಂದು ಉಮೈರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಕೂಡ ಆಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply