KARNATAKA
ಕಾಸರಗೋಡು ಮಂಜೇಶ್ವರದಲ್ಲಿ ಸಂಭ್ರಮದ ‘ನಾಗರ ಪಂಚಮಿ’ ಆಚರಣೆ
ಮಂಜೇಶ್ವರ : ಕೇರಳ ಕಾಸರಗೋಡಿನ ಹದಿನೆಂಟು ಪೇಟೆಯ ದೇವಳವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ” ನಾಗರ ಪಂಚಮಿ ” ಸಂಭ್ರಮ ದಿಂದ ಆಚರಿಸಲಾಯಿತು .
ಪ್ರಾತಃ ಕಾಲ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಶ್ರೀ ದೇವರಿಗೆ ವಾಸುಕೀ ಪೂಜೆ , ದೇವಳದ ಮುಂಭಾಗದಲ್ಲಿರುವ ಅಶ್ವತ್ಥ ಕಟ್ಟೆಯಲ್ಲಿ ಶ್ರೀ ನಾಗದೇವರ ಶೀಲಾ ಪ್ರತಿಮೆಗಳಿಗೆ ಪಂಚಾಮೃತ , ಕ್ಷೀರಾಭಿಷೇಕ , ಶಿಯಾಳಾಭಿಷೇಕ ಗಳು ಭಜಕರ ಸಮ್ಮುಖದಲ್ಲಿ ನೆರವೇರಿತು . ದೇಶ ವಿದೇಶಗಳಿಂದ ಸಹಸ್ರಾರು ಭಜಕರು ಪಾಲ್ಗೊಂಡು ಪುನೀತರಾದರು .
ಚಿತ್ರಗಳು : ಮಂಜು ನೀರೇಶ್ವಾಲ್ಯ
You must be logged in to post a comment Login