KARNATAKA
ನಾಗರಪಂಚಮಿ ಸಲುವಾಗಿ ಆಟವಾಡಲು ಬಂದ ಬಾಲಕಿ ಮನೆ ಕುಸಿದು ಮೃತ್ಯು..!
ಧಾರವಾಡ : ನಾಗರಪಂಚಮಿ ಸಲುವಾಗಿ ಆಟವಾಡಲು ಬಂದ ಪುಟ್ಟ ಬಾಲಕಿ ಮನೆ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಧಾರವಾಡ ಜಿಲ್ಲೆಯಕುಂದಗೋಳ ಪಟ್ಟಣದ ಸಾದಗೇರಿ ಓಣಿಯಲ್ಲಿ ಸಂಭವಿಸಿದೆ.
ಆಟವಾಡಲು ತೆರಳಿದ್ದ ಬಾಲಕಿಯೊಬ್ಬಳು ಮನೆ ಅವಶೇಷಗಳ ಅಡಿ ಸಿಲುಕಿ ದಾರುಣ ಅಂತ್ಯ ಕಂಡಿದ್ದಾಳೆ. ಅಮೃತಾ ಗದಿಗೆಪ್ಪ ಮೆಣಸಗೊಂಡ (5) ಮೃತಪಟ್ಟ ಬಾಲಕಿಯಾಗಿದ್ದಾಳೆ.ನಾಗರ ಪಂಚಮಿಯಂದು ಆಟವಾಡುವ ಸಲುವಾಗಿ ಬಾಲಕಿಯು ಪಕ್ಕದ ರಾಮಣ್ಣ ಕಾಳಪ್ಪ ಅರ್ಕಸಾಲಿ ಎಂಬುವವರ ಮನೆಗೆ ತೆರಳಿದ್ದಳು. ಇದೇ ಸಮಯ ಮಣ್ಣಿನ ಮೇಲ್ಚಾವಣಿ ಕುಸಿದ ಪರಿಣಾಮ ಬಾಲಕಿ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಈ ವೇಳೆ ಮಣ್ಣು ತೆಗೆದು ರಕ್ಷಿಸುವಷ್ಟರಲ್ಲಿ ಬಾಲಕಿಯ ಪ್ರಾಣಪಕ್ಷಿ ಹಾರಿ ಹೋಗಿದೆ.ಜೊತೆಗಿದ್ದ ಮತ್ತೊಂದು ಬಾಲಕಿಗೂ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
You must be logged in to post a comment Login