LATEST NEWS
ಮಹಾರಾಷ್ಟ್ರ ಸರಕಾರಕ್ಕೆ ಮುಖಭಂಗ- ಸುಶಾಂತ್ ಪ್ರಕರಣ ಸಿಬಿಐಗೆ ಒಪ್ಪಿಸಿದ ಸುಪ್ರೀಂಕೋರ್ಟ್
ನವದೆಹಲಿ : ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಮುಖಭಂಗವಾಗಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ತನಿಖೆ ಮಾಡಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಈವರೆಗೂ ಕಲೆ ಹಾಕಲಾಗಿರುವ ಎಲ್ಲ ಸಾಕ್ಷ್ಯಾಧಾರಗಳನ್ನು ಮುಂಬೈ ಪೊಲೀಸರು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸಿಬಿಐ ತನಿಖೆಯನ್ನು ವಿರೋಧಿಸುತ್ತಿದ್ದ ಬಂದಿದ್ದ ಮಹಾರಾಷ್ಟ್ರ ಸರಕಾರಕ್ಕೆ ಮುಖಭಂಗವಾದಂತಾಗಿದ್ದು, ಬಿಹಾರ ಪೊಲೀಸರಿಗೂ ಕೂಡ ಸುಶಾಂತ್ ಸಿಂಗ್ ಸಾವಿನ ಪ್ರಕರಣ ತನಿಖೆ ನಡೆಸಲು ಅವಕಾಶ ನೀಡದ ಮುಂಬೈ ಪೊಲೀಸರು ಈಗ ಪ್ರಕರಣ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಿಬಿಐಗೆ ನೀಡಬೇಕಿದೆ.
ಪಾಟ್ನಾದಲ್ಲಿ ದಾಖಲಾಗಿರುವ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಬೇಕು ಎಂದು ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಮನವಿ ಮಾಡಿಕೊಂಡಿದ್ದರು. ಅದನ್ನು ಕೋರ್ಟ್ ತಳ್ಳಿ ಹಾಕಿದೆ. ಅದರಿಂದ ರಿಯಾಗೆ ಹಿನ್ನಡೆ ಆಗಿದೆ. ಸುಶಾಂತ್‌ಗೆ ಸಂಬಂಧಿಸಿದಂತೆ ಬೇರೆ ಯಾವುದೇ ಎಫ್‌ಐಆರ್ ದಾಖಲಾಗಿದ್ದರೂ ಕೂಡ ಅದನ್ನು ಸಿಬಿಐ ಅಧಿಕಾರಿಗಳೇ ತನಿಖೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಈ ಹೈಪ್ರೊಫೈಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ ಮತ್ತು ಬಿಹಾರ ಪೊಲೀಸರ ನಡುವೆ ಜಟಾಪಟಿ ಏರ್ಪಟ್ಟಿತ್ತು. ಐಪಿಸಿ ಸೆಕ್ಷನ್ 174ರ ಅಡಿಯಲ್ಲಿ ಮುಂಬೈ ಪೊಲೀಸರ ನ್ಯಾಯವ್ಯಾಪ್ತಿ ಚಿಕ್ಕದಾಗಿದೆ. ಮುಂಬೈ ಪೊಲೀಸರು ಕೇವಲ ಆಕಸ್ಮಿಕ ಮರಣದ ಕೇಸ್ ದಾಖಲಿಸಿದ್ದರಿಂದ ಅವರಿಗೆ ತನಿಖೆ ಮಾಡುವ ಅಧಿಕಾರ ನಿಯಮಿತವಾಗಿತ್ತು’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಜೂ.14ರಂದು ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಶವ ಪತ್ತೆ ಆಯಿತು. ಕೆಲವೇ ದಿನಗಳ ಬಳಿಕ ಸುಶಾಂತ್ ತಂದೆ ಕೆ.ಕೆ. ಸಿಂಗ್ ಅವರು ಪಾಟ್ನಾದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅನೇಕರು ಒತ್ತಾಯಿಸಿದ್ದರು.
Facebook Comments
You may like
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಅಕ್ಷಯ್ ಕುಮಾರ್ ಹೆಸರು.. ಯ್ಯೂಟ್ಯೂಬರ್ ಮೇಲೆ ಬಿತ್ತು 500 ಕೋಟಿ ಮಾನನಷ್ಟ ಮೊಕದ್ದಮೆ
ಇನ್ನು ಕೇರಳದಲ್ಲಿ ಸಿಬಿಐ ತನಿಖೆಗೆ ಅನುಮತಿ ಇಲ್ಲ…!!
ನಟ ಸುಶಾಂತ್ ಕುರಿತು ನಕಲಿ ಟ್ವೀಟ್ ಪ್ರಸಾರ ‘ಆಜ್ ತಕ್’ಗೆ ಒಂದು ಲಕ್ಷ ರೂ. ದಂಡ
ಬಾಬರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಶಿ ಸೇರಿದಂತೆ ಎಲ್ಲ ಆರೋಪಿಗಳು ದೋಷಮುಕ್ತ
ಡ್ರಗ್ಸ್ ಲಿಂಕ್, ಖ್ಯಾತ ನಟಿ ದೀಪಿಕಾ ಪಡುಕೋಣೆ ಎನ್.ಸಿ.ಬಿ ವಿಚಾರಣೆಗೆ ಹಾಜರು….
ಬಾಲಿವುಡ್ ಡ್ರಗ್ಸ್ ಜಾಲ, ಖ್ಯಾತ ನಟಿ ದೀಪಿಕಾ ಪಡುಕೋಣೆಗೆ ಸಂಕಷ್ಟ…….
You must be logged in to post a comment Login