ಪುತ್ತೂರು ಜನವರಿ 21: ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮಿಯವರ 78 ನೇ ಜಯಂತೋತ್ಸವ ಕಾರ್ಯಕ್ರಮ ಜನವರಿ 22 ರಂದು ಪುತ್ತೂರಿನಲ್ಲಿ ನಡೆಯಲಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ,ಉಡುಪಿ,ಕೊಡಗು ಭಾಗದ ಸುಮಾರು 1 ಲಕ್ಷ ಜನ...
ಮಂಗಳೂರು, ಜನವರಿ 21 : ಗಸ್ತು ನಿರತ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಐವರ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯ ಮಲ್ಲಿಕಾರ್ಜುನ ಅಂಗಡಿ ಎಂಬವರು...
ಪುತ್ತೂರು, ಜನವರಿ 20: ಬಿಜೆಪಿ ಮುಖಂಡ ಉದ್ಯಮಿ ಅಶೋಕ್ ರೈ ಕೋಡಿಂಬಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಕ್ಕೆ ಸ್ವಾಗತ ಆದರೆ ಯಾವುದೇ ನಿರೀಕ್ಷೆಯಿಟ್ಟು ಸೇರಬಾರದು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ರೈ ಸ್ಪಷ್ಟಪಡಿಸಿದ್ದಾರೆ. ಪುತ್ತೂರು...
ಪುತ್ತೂರು, ಜನವರಿ 20: ಹಣದ ವಿಚಾರದಲ್ಲಿ ತಂಡವೊಂದು ವ್ಯಕ್ತಿಯನ್ನು ಅಪಹರಣ ಮಾಡಿ, ಸಹೋದರನ ಮಾಹಿತಿಯನ್ನು ಪಡೆಯುವ ಜತೆಗೆ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಕೊಯಿಲ ನಿವಾಸಿ ನಿಝಾಮ್ (25) ಆಸ್ಪತ್ರೆಯಗೆ...
ಉಪ್ಪಿನಂಗಡಿ, ಜನವರಿ 19: ಮಧ್ಯಾಹ್ನ ಹೊತ್ತೇ ಪ್ರತ್ಯಕ್ಷಗೊಂಡ ಚಿರತೆಯೊಂದು ಮನೆಯ ವರಾಂಡದಲ್ಲಿದ್ದ ನಾಯಿ ಮರಿಯೊಂದನ್ನು ಹೊತ್ತೊಯ್ದ ಘಟನೆ ಬುಧವಾರ ತಣ್ಣೀರುಪಂಥ ಗ್ರಾಮದ ಅಳಕ್ಕೆ ಎಂಬಲ್ಲಿ ನಡೆದಿದೆ. ತಣ್ಣೀರುಪಂಥ ಗ್ರಾಮದ ಅಳಕ್ಕೆಎಂಬಲ್ಲಿ ಗಣೇಶ್ ಎಂಬವರ ಮನೆಯ ವರಾಂಡದಲ್ಲಿ ಕಾಣಿಸಿಕೊಂಡ ಚಿರತೆ ವರಾಂಡದಲ್ಲಿ ಮಲಗಿದ್ದ 40 ದಿನ ಪ್ರಾಯದ ಪಗ್ ಜಾತಿಯ ನಾಯಿ ಮರಿಯನ್ನು ಕಚ್ಚಿಕೊಂಡು ಹೊತ್ತೊಯ್ದಿದೆ. ಗಣೇಶ್ ಇವರ ಪತ್ನಿ ಕಣಿಯೂರು ಗ್ರಾಮ ಪಂಚಾಯತ್ನಲ್ಲಿ ಪಿಡಿಒ ಆಗಿದ್ದು, ಅವರು ಕಚೇರಿಗೆ ಹೋಗಿದ್ದರು. ಕಲ್ಲೇರಿಯಲ್ಲಿ ಅಂಗಡಿ ಹೊಂದಿದ್ದ ಗಣೇಶ್ ಅವರು ಈ ಸಂದರ್ಭ ಮನೆಯಲ್ಲಿ ಒಬ್ಬರೇ ಇದ್ದಾಗ ಈ ಘಟನೆ ಸಂಭವಿಸಿದೆ. ಚಿರತೆ ಬಂದು ನಾಯಿ ಮರಿಯನ್ನು ಹೊತ್ತೊಯ್ದ ಘಟನೆಯ ಬಗ್ಗೆ ಊರಿನಲ್ಲಿ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿರುವ ಚಿರತೆಯ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಬಾರ್ಯ, ನೀಲಗಿರಿ ಪರಿಸರದಲ್ಲಿ ಸುಮಾರು 2 ತಿಂಗಳಿನಿಂದ ಚಿರತೆ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆ ಗಮನಕ್ಕೂ ತರಲಾಗಿದೆ.
ಮಂಗಳೂರು ಜನವರಿ 19: ಟೊಯೋಟಾ ಇನೋವಾ ಕಾರೊಂದು ಕಳೆದ ಕೆಲವು ದಿನಗಳಿಂದ ವಾರಿಸುದಾರರಿಲ್ಲದೆ ಬಿಸಿರೋಡಿನಲ್ಲಿ ಅನಾಥವಾಗಿ ನಿಂತುಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಈ ಕಾರಿನ ಬಗ್ಗೆ ಸಾಕಷ್ಟು ಸಂಶಯಗಳು ಮೂಡಿದ್ದು, ಊಹಾಪೋಹಗಳು ಕೇಳಿ ಬಂದಿದೆ. ಬಿ.ಸಿ ರೋಡಿನ...
ವಿಟ್ಲ, ಜನವರಿ 19: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪರಿಣಾಮ ಮನೆ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಮಾಣಿ ಸಮೀಪ ನಡೆದಿದೆ. ಘಟನೆಯಿಂದ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಮಾಣಿ ಗ್ರಾಮದ ಕಾಪಿಕಾಡು ರಮಾ ಅಶೋಕ್ ಪೂಜಾರಿ...
ಉಪ್ಪಿನಂಗಡಿ, ಜನವರಿ 18: ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟಗೊಂಡು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿ ಗಾಂಧಿ ಪಾರ್ಕ್ ನಲ್ಲಿ ಕಾರ್ಯಾ ನಿರ್ವಹಿಸುತ್ತಿರುವ ಇಂಡಿಯನ್ ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ...
ಮಂಗಳೂರು, ಜನವರಿ 18: ‘ನಾನು ಶಾಸಕನಾದ ಬಳಿಕ ನಗರದ ವಿವಿಧ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ನಾಲ್ಕೂವರೆ ವರ್ಷಗಳಲ್ಲಿ ₹ 4,750 ಕೋಟಿ ಅನುದಾನ ಬಿಡುಗಡೆ ಆಗಿದೆ. ಆದರೆ,...
ಮಂಗಳೂರು, ಜನವರಿ 18: ನಗರದ ಮಣಪ್ಪುರಂ ಫೈನಾನ್ಸ್ನ ಉದ್ಯೋಗಿಯಾಗಿದ್ದ ಯುವತಿಯೊಬ್ಬಳು ನಾಪತ್ತೆಯಾದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಮಲಾಕ್ಷ ಎಂಬವರ ಪುತ್ರಿ ಶಿವಾನಿ (20) ಕಾಣೆಯಾದ ಯುವತಿ. ಈಕೆ ಜ.16ರಂದು ಬೆಳಗ್ಗೆ 7ಕ್ಕೆ ಕೆಲಸಕ್ಕೆ...