Connect with us

    DAKSHINA KANNADA

    ಪ್ರವೀಣ್ ನೆಟ್ಟಾರದ್ದು ರಾಷ್ಟ್ರ ಕಟ್ಟುವ ಕನಸಾಗಿತ್ತು: ಕಲ್ಲಡ್ಕ ಪ್ರಭಾಕರ್ ಭಟ್

    ಪುತ್ತೂರು, ಎಪ್ರಿಲ್ 27: ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ರವರ ಮನೆ ಗೃಹಪ್ರವೇಶ ಸಂದರ್ಭದಲ್ಲಿ RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ರವರು ಪ್ರವೀಣ್ ನೆಟ್ಟಾರು ಕನಸು ಕೇವಲ ಮನೆ ಕಟ್ಟುವುದಾಗಿರಲಿಲ್ಲ ಅವನದು ರಾಷ್ಟ್ರ ಕಟ್ಟುವ ಕನಸಾಗಿತ್ತು ಎಂದಿದ್ದಾರೆ.

    ರಾಷ್ಟ್ರ ಕಟ್ಟುವ ಕನಸಿಗೋಸ್ಕರ ತನ್ನ ಬಲಿದಾನವನ್ನೇ ಮಾಡಿದ್ದಾನೆ, ದೇಶವನ್ನು ಕಬಳಿಸುವ ಪ್ರಯತ್ನ ಭಯೋತ್ಪಾದಕರಿಂದ ಆಗುತ್ತಿದೆ, ದೇಶದಲ್ಲಿ ಯಾವಾಗ ಕಾಂಗ್ರೆಸ್ ಅಧಿಕಾರ ಬಂತೋ ಅಂದಿನಿಂದ ಮುಸ್ಲಿಂ ತುಷ್ಠೀಕರಣ ಪ್ರಾರಂಭವಾಯಿತು. ಇವತ್ತು ಕೂಡಾ ಕಾಂಗ್ರೆಸ್ ಅದನ್ನೇ ಮಾಡುತ್ತಿದೆ, ಸಿದ್ದರಾಮಯ್ಯ ಮತ್ತು ಡಿಕೆಶಿ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಶೇಧ ಕಾಯ್ದೆ ಹಿಂಪಡೆಯುತ್ತೇವೆ, ಮತಾಂತರ ಕಾಯ್ದೆ ಹಿಂದೆ ಪಡೆಯುತ್ತೇವೆ ಅನ್ನುತ್ತಿದ್ದಾರೆ.

    ಕಾಂಗ್ರೇಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದೇ ಇಲ್ಲ, ಮುಸ್ಲಿಂ ತುಷ್ಢೀಕರಣದ ನಡುವೆ ಪ್ರವೀಣ್ ಹತ್ಯೆ ನಡೆದಿರೋದು ಮುಸ್ಲಿಮರಿಗೆ ರಾಜಾರೋಷವಾಗಿ ನಡೆಯಬಹುದು ಎನ್ನುವಂತಹ ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಓರ್ವ ದೇಶಭಕ್ತನ ಕೊಲೆಯಾಯ್ತು, ಇದನ್ನು ಹೀಗೇ ಬಿಟ್ಟಲ್ಲಿ ಇದು ಮುಂದುವರಿಯುತ್ತದೆ, ದೇಶಭಕ್ತ ಬಂದುಗಳು ಚುನಾವಣೆಯ ಈ ಸಂದರ್ಭದಲ್ಲಿ ಪ್ರತಿಜ್ಞೆ ತೆಗೆದುಕೊಳ್ಳಬೇಕು, ಬಿಜೆಪಿ ಪಕ್ಷಕ್ಕೆ ತಮ್ಮ ಬೆಂಬಲ ನೀಡಬೇಕು, ಪ್ರವೀಣ್ ಗೆ ಕೂಡಾ ಅದೇ ರೀತಿಯ ಚಿಂತನೆಯಿತ್ತು, ಬಿಜೆಪಿಯನ್ನು ಎಲ್ಲಾ ಕಡೆ ಗೆಲ್ಲಿಸಬೇಕು ಎನ್ನುವ ಆಸೆ ಪ್ರವೀಣ್ ಗಿತ್ತು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply