Connect with us

KARNATAKA

ಮಾಜಿ ಸಚಿವ ಯು.ಟಿ ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ದಾವಣಗೆರೆ ಎಪ್ರಿಲ್ 14: ಶಾಸಕ ಯು.ಟಿ ಖಾದರ್ ಅವರು ಸಂಚರಿಸುತ್ತಿದ್ದ ಕಾರು ದಾವಣಗೆರೆ ಸಮೀಪದ ಒಲಾಲ್ ಕ್ರಾಸ್ ಎಂಬಲ್ಲಿ ಅಪಘಾತಕ್ಕೀಡಾಗಿದ್ದು, ಖಾದರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಬೆಳಗಾವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಿಸುತ್ತಿದ್ದ ವೇಳೆ ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ.

ದಾವಣಗೆರೆ ಸಮೀಪದ ಒಲಾಲ್ ಕ್ರಾಸ್ ಬಳಿ ಖಾದರ್ ಅವರ ಕಾರಿನ ಎದುರಿನಲ್ಲಿ ಸಂಚರಿಸುತ್ತಿದ್ದ ಲಾರಿಯೊಂದರ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ. ಈ ವೇಳೆ ಶಾಸಕರ ಕಾರು ಲಾರಿಗೆ ಹಿಂಬದಿಯಿಂದ ಢಿಕ್ಕಿಯಾಗಿದೆ. ಇದರಿಂದ ಖಾದರ್ ಅವರ ಮುಖ ಮತ್ತು ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ.