LATEST NEWS
ರಸ್ತೆ ದಾಟಲು ಹೋಗಿ ಕಾರಿನಡಿ ಬಿದ್ದ ಬಾಲಕ…. ಅಪಘಾತದ ಸಿಸಿಟಿವಿ ವಿಡಿಯೋ….!!

ಬಂಟ್ವಾಳ : ರಸ್ತೆ ದಾಟಲು ಓಡಿ ಹೋಗಿ ಕಾರಿನಡಿಗೆ ಬಿದ್ದ ಬಾಲಕನೋರ್ವ ಪವಾಡಸದೃಶವಾಗಿ ಪಾರಾದ ಘಟನೆ ಬಂಟ್ವಾಳದ ಇರಾ ಬಳಿ ನಡೆದಿದೆ. ಘಟನೆ ಕುರಿತ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶಿವಾನಂದ್ ಎಂಬವರ ಪುತ್ರ ಮನೋಜ್ (12) ಗಾಯಾಳು ಬಾಲಕ. ಆಟವಾಡಲೆಂದು ಮನೆಯಿಂದ ಹೊರ ಓಡಿಬಂದ ಬಾಲಕ ರಸ್ತೆ ದಾಟುವಾಗ ಒಂದೇ ಸಮನೇ ಓಡಿದ್ದಾನೆ. ಈ ಸಂದರ್ಭ ಆಗಮಿಸಿದ ಕಾರು ಆತನಿಗೆ ಡಿಕ್ಕಿ ಹೊಡೆದಿದೆ. ಕಾರಿನಡಿಗೆ ಬಾಲಕ ಬಿದ್ದು ಎಡಕಾಲು ಮುರಿತಕ್ಕೊಳಗಾಗಿದ್ದು, ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ.

Continue Reading