LATEST NEWS
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಮತಯಾಚನೆ

ಮಂಗಳೂರು ಎಪ್ರಿಲ್ 25: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ ವೇದವ್ಯಾಸ್ ಕಾಮತ್ ಬಿರುಸಿನ ಮತ ಯಾಚನೆ ನಡೆಸುತ್ತಿದ್ದು, ಅವರು ಇಂದು ಕದ್ರಿ ಉತ್ತರ ವಾರ್ಡ್ ಹಾಗೂ ಅಳಪೆ ದಕ್ಷಿಣ ವಾರ್ಡ್ ನಲ್ಲಿ ಮತಯಾಚಿಸಿದರು.
ಮನೆ ಮನೆಯಲ್ಲೂ ಬಿಜೆಪಿ ಪರ ಅಲೆ ಇರುವುದು ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ವೇದವ್ಯಾಸ ಕಾಮತ್ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್, ಬಿಜೆಪಿ ಮುಖಂಡರು, ಹಾಗೂ ಕಾರ್ಯಕರ್ತ ಮಿತ್ರರು ಉಪಸ್ಥಿತರಿದ್ದರು.
