Connect with us

  LATEST NEWS

  150 ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಮೂಲಕ ಪೂರ್ಣ ಬಹುಮತದಿಂದ ಬಿಜೆಪಿ ಸರಕಾರ ಬರಲಿದೆ – ನಳಿನ್ ಕುಮಾರ್ ಕಟಿಲ್

  ಮಂಗಳೂರು ಎಪ್ರಿಲ್ 25: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಮೂಲಕ ಸಂಪೂರ್ಣ ಬಹುಮತದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.


  ಅವರು ಇಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರ ಪರವಾಗಿ ಬಿಜೈ, ದೇರೆಬೈಲ್ ದಕ್ಷಿಣ, ಕಂಕನಾಡಿ, ಅಳಪೆ, ಜಪ್ಪಿನಮೊಗರು ಹಾಗೂ ಬೋಳಾರದಲ್ಲಿ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರವಿಲ್ಲದೆ ಜನಪರ ಆಡಳಿತ ನೀಡಿದ ಬಿಜೆಪಿ ಸರಕಾರದ ಪರ ಮತದಾರ ಒಲವು ತೋರಿಸುತ್ತಿದ್ದು ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಜನರೇ ಮುನ್ನುಡಿ ಬರೆಯಲಿದ್ದಾರೆ. ಬಿಜೆಪಿಯ ಅಭಿವೃದ್ಧಿ ಓಟಕ್ಕೆ ಜನತೆ ಸಾಥ್ ನೀಡಿದ್ದು ಈ ಬಾರಿ ರಾಜ್ಯದಲ್ಲಿ 150 ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವುದು ನಿಶ್ಚಿತ ಎಂದು ತಿಳಿಸಿದರು.


  ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಚುನಾವಣಾ ಕ್ಷೇತ್ರ ಸಂಚಾಲಕ ನಿತಿನ್ ಕುಮಾರ್, ಸಹ ಸಂಚಾಲಕರಾದ ಜಿತೇಂದ್ರ ಕೊಟ್ಟಾರಿ, ರಮೇಶ್ ಹೆಗ್ಡೆ, ದೀಪಕ್ ಪೈ, ಕಿರಣ್ ರೈ, ಅಜಯ್ ಕುಲಶೇಖರ, ಪಾಲಿಕೆ ಸದಸ್ಯರಾದ ವೀಣಾ ಮಂಗಳ, ರೇವತಿ ಶ್ಯಾಮ್ ಸುಂದರ್, ಭಾನುಮತಿ, ಶೋಭಾ ಪೂಜಾರಿ, ಪ್ರಮುಖರಾದ ಪ್ರಶಾಂತ್ ಆಳ್ವ, ವಿನಯ್ ನೇತ್ರಾ, ರಘುವೀರ್ ಬಾಬುಗುಡ್ಡೆ, ಪ್ರಜ್ವಲ್ ಚಿಲಿಂಬಿ, ಉಮಾನಾಥ್ ಅಮೀನ್, ಗಂಗಾಧರ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply