LATEST NEWS
ಉಡುಪಿ – ರಸ್ತೆಯಲ್ಲೇ ಪ್ರತ್ಯಕ್ಷವಾದ ದೈತ್ಯ ಗಾತ್ರದ ಕಾಡುಕೋಣ

ಉಡುಪಿ ಜುಲೈ 19 : ದೈತ್ಯ ಗಾತ್ರದ ಕಾಡುಕೋಣವೊಂದು ರಸ್ತೆಯಲ್ಲಿ ಪ್ರತ್ಯಕ್ಷ ವಾದ ಘಟನೆ ಶಿರ್ವ ಸಮೀಪದ ಪಿಲಾರು ಕಾಡಿನ ಬಳಿ ಇರುವ ರಸ್ತೆಯಲ್ಲಿ ನಡೆದಿದೆ.
ಆಹಾರ ಅರಸಿಕೊಂಡು ಕಾಡುಕೋಣ ನಾಡಿಗೆ ಬಂದಿರುವ ಸಾಧ್ಯತೆ ಇದೆ ಹೇಳಲಾಗಿದ್ದು, ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ವಿಜಯ್ , ಧೀರಜ್ ಮತ್ತು ಸಂಗಡಿಗರು ಕಾಡುಕೋಣವನ್ನು ಮತ್ತೆ ಕಾಡಿಗೆ ಕಳಿಸುವಲ್ಲಿ ಸಫಲರಾಗಿದ್ದಾರೆ.

ಇದರಿಂದಾಗಿ ವಾಹನ ಸವಾರರು, ಪಾದಾಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.