LATEST NEWS
ಮುಲ್ಕಿ – ಡ್ರೈನೇಜ್ ಪಿಟ್ ನಲ್ಲಿ ಮಹಿಳೆಯ ಶವಪತ್ತೆ…!!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಮುಲ್ಕಿ ಜುಲೈ 19: ಮುಲ್ಕಿಯ ಮನೆಯೊಂದರ ಡ್ರೈನೇಜ್ ಪಿಟ್ ನಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಕಲ್ಲಾಪು ನಿವಾಸಿ ನಾಗಮ್ಮ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ.
ಪಡುಪಣಂಬೂರು ಪಂಚಾಯತ್ ವ್ಯಾಪ್ತಿಯ ಪುಷ್ಪರಾಜ್ ಅಮೀನ್ ಎಂಬವರ ಮನೆಯ ಹಿಂದುಗಡೆ ಇರುವ ಡ್ರೈನೇಜ್ ಪಿಟ್ ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಇನ್ನು ಮಹಿಳೆ ನಾಗಮ್ಮ ಕಳೆದ 4ತಿಂಗಳ ಹಿಂದೆ ಕಲ್ಲಾಪಿನಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಮನೆ ಮಾಲಕ ಪುಷ್ಪರಾಜ್ ಅಮೀನ್ ಅವರು ಮುಂಬೈನಲ್ಲಿ ವಾಸವಾಗಿದ್ದು, ಯಾವಾಗಲಾದರೂ ಒಮ್ಮೆ ಊರಿಗೆ ಬರ್ತಾ ಇರುತ್ತಾರೆ. ಇದೀಗ ಊರಿಗೆ ಬಂದಿದ್ದು, ಮನೆ ಹಿಂಬದಿಯ ಪಿಟ್ ನಲ್ಲಿ ಶವ ಇರುವುದನ್ನು ಗಮನಿಸಿ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
You must be logged in to post a comment Login