Connect with us

LATEST NEWS

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬೈಂದೂರು ಶಾಸಕರ ಪಾದಯಾತ್ರೆ

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬೈಂದೂರು ಶಾಸಕರ ಪಾದಯಾತ್ರೆ

ಮಂಗಳೂರು ಜೂನ್ 26: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಪಾದಯಾತ್ರೆ ನಡೆಸಿದ್ದಾರೆ. ನೂರಾರು ಕಾರ್ಯಕರ್ತರ ಜೊತೆಯಲ್ಲಿ ಬೈಂದೂರಿನ ನೆಂಪು ಎಂಬ ಹಳ್ಳಿಯಿಂದ ಕೊಲ್ಲೂರು ಕ್ಷೇತ್ರಕ್ಕೆ ಪಾದಯಾತ್ರೆ ಯ ಮೂಲಕವೇ ಹೋಗಿದ್ದಾರೆ.

ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯನ್ನೂ ಲೆಕ್ಕಿಸದೆ ಸುಮಾರು 25 ಕಿಮೀ ವರೆಗೆ ನಡೆದು ಸಾಗಿದ ಶಾಸಕ ಸುಕುಮಾರ ಶೆಟ್ಟಿ, ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡಿ ಮುಕಾಂಬಿಕೆಯ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಪ್ರಧಾನಿ ಮೋದಿಯವರು ಭೃಷ್ಡಾಚಾರ ರಹಿತ ಆಡಳಿತ ನೀಡಿದ್ದು, ಮುಂದಿನ ಚುನಾವಣೆಯ ಲ್ಲೂ ಅವರಿಗೆ ಜನಾದೇಶ ದೊರಕಲಿ ಎಂದು ಈ ವೇಳೆ ಸಂಕಲ್ಪಿಸಲಾಯ್ತು.

ಅಂತೆಯೇ ಕರ್ನಾಟಕದಲ್ಲಿ ಯಡ್ಯೂರಪ್ಪ ನೇತೃತ್ವದ ಆಡಳಿತ ಸ್ಥಾಪನೆಯಾಗಲಿ ಎಂದು ಹರಕೆ ಹೊತ್ತು ಪೂಜೆ ಸಲ್ಲಿಸಲಾಯ್ತು. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಕೊಲ್ಲೂರು ಕ್ಷೇತ್ರದ ಮಾಜಿ ಧರ್ಮದರ್ಶಿಯಾಗಿದ್ದು,

ಇದೇ ಮೊದಲ ಬಾರಿಗೆ ಬಿಜೆಪಿ ಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಪಾದಯಾತ್ರೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.