Connect with us

LATEST NEWS

ಅಪ್ರಾಪ್ತ ಬಾಲಕಿಗೆ ಮೊಬೈಲ್ ನಂಬರ್ ನೀಡಿ ಕರೆ ಮಾಡಿದ ಕಂಡಕ್ಟರ್ ಗೆ ಬಿತ್ತು ಧರ್ಮದೇಟು

ಮಂಗಳೂರು ಎಪ್ರಿಲ್ 24: ಬಸ್ ಕಂಡಕ್ಟರ್ ನೊಬ್ಬ ಅಪ್ರಾಪ್ತ ಬಾಲಕಿಗೆ ಮೊಬೈಲ್ ನಂಬರ್ ನೀಡಿದ ಹಿನ್ನಲೆ ಬಾಲಕಿ ತಾಯಿ ಕಂಡಕ್ಟರ್ ಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.


ಮಂಗಳೂರಿನಲ್ಲಿ 8ನೇ ತರಗತಿ ಓದುತ್ತಿರುವ ಬಾಲಕಿಯೋರ್ವಳು ಬಸ್‌ನಲ್ಲಿ ಸಂಚರಿಸುತ್ತಿದ್ದಾಗ ಮಾತನಾಡಿಸಿದ ಬಸ್ ನಿರ್ವಾಹಕ ಬಳಿಕ ಮೊಬೈಲ್ ನಂಬರ್‌ನ್ನು ಆಕೆಗೆ ನೀಡಿದ್ದಾನೆ. ಅಲ್ಲದೆ, ಬಾಲಕಿಯ ಮನೆಗೆ ಕರೆ ಮಾಡಿ ಬಾಲಕಿಯೊಂದಿಗೆ ಮಾತನಾಡಿ ಮನೆಯಲ್ಲಿ ಯಾರ್‍ಯಾರಿದ್ದಾರೆ ಎಂದು ಕೇಳಿದ್ದಾನೆ. ಇದರಿಂದ ಕೆರಳಿದ ಬಾಲಕಿಯ ತಾಯಿ ನಿರ್ವಾಹಕನನ್ನು ಭೇಟಿಯಾಗಿ ಆತನಿಗೆ ಹಿಗ್ಗಾಮಗ್ಗ ಥಳಿಸಿದ್ದಾಳೆ. ಬಾಲಕಿ ಒಂದೇ ಬಾರಿ ಈ ಬಸ್‌ನಲ್ಲಿ ಸಂಚರಿಸಿದ್ದು, ಆಗಲೇ ಮೊಬೈಲ್ ನಂಬರ್‍ ನೀಡಿದ್ದ ಎನ್ನಲಾಗಿದೆ.

Advertisement
Click to comment

You must be logged in to post a comment Login

Leave a Reply