LATEST NEWS
ಬುಲೆಟ್ ರಾಣಿಯರ ಸ್ಟಂಟ್ ಗೆ ಬಿತ್ತು 28 ಸಾವಿರ ದಂಡ

ಲಕ್ನೋ :ಬುಲೆಟ್ ನಲ್ಲಿ ಬೈಕ್ ಸ್ಟಂಟ್ ಮಾಡಿ ವಿಡಿಯೋ ವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ ಬುಲೆಟ್ ರಾಣಿಯರಿಗೆ ಪೊಲೀಸರು 28 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಉತ್ತರ ಪ್ರದೇಶದ ಗಾಜಿಯಾಬಾದ್‍ನ ಶಿವಾಂಗಿ ದಬಾಸ್ ತನ್ನ ಸ್ನೇಹಿತೆ ಕುಸ್ತಿಪಟು ಸ್ನೇಹಾ ರಘವಂಶಿಯ ಹೆಗಲ ಮೇಲೆ ಕೂತು ಬುಲೆಟ್ ಬೈಕ್‍ನಲ್ಲಿ ಸ್ಟಂಟ್ ಮಾಡಿದ್ದಾಳೆ. ಅಲ್ಲದೆ ತಮ್ಮ ಸ್ಟಂಟ್ ನ್ನು ಚಿತ್ರೀಕರಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದು, ಈ ವೀಡಿಯೋ ವೈರಲ್ ಆಗಿತ್ತು.

ಇದನ್ನು ಗಮನಿಸಿದ ಸ್ಥಳೀಯ ಠಾಣೆ ಪೊಲೀಸರು ಬೈಕ್ ರೈಡ್ ಮಾಡಿದ ಸ್ನೇಹಾ ರಘವಂಶಿಗೆ 11,000 ರೂಪಾಯಿ ಮತ್ತು ಬೈಕ್‍ನ ಮಾಲಿಕ ಸಂಜಯ್ ಕುಮಾರ್ ಎಂಬವರಿಗೆ 17,000 ರೂಪಾಯಿ ಸೇರಿ ಒಟ್ಟು 28,000 ರೂಪಾಯಿ ದಂಡ ಕಟ್ಟುವಂತೆ ನೋಟಿಸ್ ನೀಡಿದ್ದಾರೆ.