LATEST NEWS
ಯಡಿಯೂರಪ್ಪ ನಡೆಸಿದ ಯಾಗದ ಮೂಲ ಕಾರಣವೇನು ?

ಯಡಿಯೂರಪ್ಪ ನಡೆಸಿದ ಯಾಗದ ಮೂಲ ಕಾರಣವೇನು ?
ಮಂಗಳೂರು ಜುಲೈ 25: ಮತ್ತೆ ಮುಖ್ಯಮಂತ್ರಿ ಗಾದಿಯನ್ನು ಅಲಂಕರಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೇವರ ಮೊರೆ ಹೋಗಿದ್ದಾರೆ. ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ನಡೆಯುತ್ತಿರುವ ಗೊಂದಲಗಳ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ನಡೆಸಿರುವ ಈ ಯಾಗ ಬಹಳ ಕುತೂಹಲ ಮೂಡಿಸಿದೆ.
ಉಡುಪಿ ಸಮೀಪದ ಕುತ್ಯಾರು ಆನೆಗುಂದಿ ಮಠದಲ್ಲಿ ಬಿ.ಎಸ್ ಯಡಿಯೂರಪ್ಪ ಅವರಿಂದ ಮಹಾರುದ್ರಯಾಗ ಮತ್ತು ಶತ ಚಂಡಿಕಾಯಾಗ ನೆರವೇರಿಸಿದ್ದಾರೆ. ಪುತ್ತೂರಿನ ಪುರೋಹಿತರಾದ ಶ್ರೀಕೃಷ್ಣ ಉಪಾಧ್ಯಾಯ ಮತ್ತು ಸುಳ್ಯ ಮೂಲದ ಪುರೋಹಿತರ ನೇತೃತ್ವದಲ್ಲಿ ಈ ಯಾಗವನ್ನು ನೇರವೆರಿಸಲಾಗಿದೆ.

ಕುಟುಂಬ ಸಮೇತರಾಗಿ ಶನಿವಾರ ಮಠಕ್ಕೆ ಆಗಮಿಸಿದ್ದ ಯಡಿಯೂರಪ್ಪ, ಶನಿವಾರ ಮಠದಲ್ಲಿ ತಂಗಿ ರವಿವಾರ ಹಾಗೂ ಸೋಮವಾರ ಯಾಗದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಪುತ್ರರಾದ ವಿಜಯೇಂದ್ರ ಹಾಗೂ ರಾಘವೇಂದ್ರ ಕೂಡಾ ಯಾಗದಲ್ಲಿ ಭಾಗಿಯಾಗಿದ್ದರು.