BELTHANGADI
ಬೆಳ್ತಂಗಡಿ ಕುಕ್ಕಾಜೆ ಬಳಿ ಕುಸಿದ ಸೇತುವೆ ಸಂಪರ್ಕ ಇಲ್ಲದೆ ದ್ವೀಪವಾದ ಆಲಂಬ

ಬೆಳ್ತಂಗಡಿ ಕುಕ್ಕಾಜೆ ಬಳಿ ಕುಸಿದ ಸೇತುವೆ ಸಂಪರ್ಕ ಇಲ್ಲದೆ ದ್ವೀಪವಾದ ಆಲಂಬ
ಬೆಳ್ತಂಗಡಿ ಮೇ.27: ಬೆಳ್ತಂಗಡಿ ತಾಲೂಕಿನ ಕುಕ್ಕುಜೆ ಬಳಿ ನಿರ್ಮಾಣಗೊಂಡಿದ್ದ ಸುಮಾರು 45 ವರ್ಷ ಹಳೆಯ ಸೇತುವೆಯೊಂದು ಸಂಪೂರ್ಣ ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಕುತ್ಲಾರು ಗ್ರಾಮದ ಕುಕ್ಕುಜೆ ಕ್ರಾಸ್ ನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಆಲಂಬಕ್ಕೆ ಸಂಪರ್ಕಿಸುವ ರಸ್ತೆಯ ಸೇತುವೆ ಇದಾಗಿದ್ದು, ಸುಮಾರು 45 ವರ್ಷ ಹಳೆಯ ಸೇತುವೆ ಇದಾಗಿದ್ದು, ಕಳೆದ ವರ್ಷ ಭಾರೀ ಮಳೆಗೆ ಈ ಸೇತುವೆಯ ಒಂದು ಪಾರ್ಶ್ವಕ್ಕೆ ಹಾನಿಯಾಗಿತ್ತು. ಇದೀಗ ಸೇತುವೆ ಸಂಪೂರ್ಣ ಕುಸಿದಿದೆ. ಸುಮಾರು 200 ಕುಟುಂಬಗಳಿಗೆ ಆಸರೆಯಾಗಿದ್ದ ಸೇತುವೆ, ಇದೀಗ ಸೇತುವೆ ಕುಸಿತದಿಂದ ಆಲಂಬ ಪರಿಸರ ಸಂಪೂರ್ಣ ದ್ವೀಪದಂತಾಗಿದೆ.
