Connect with us

LATEST NEWS

ಉಡುಪಿಯಲ್ಲಿ ದಾಖಲೆಯ 27 ಮಂದಿಗೆ ಕೊರೊನಾ

ಉಡುಪಿಯಲ್ಲಿ ದಾಖಲೆಯ 27 ಮಂದಿಗೆ ಕೊರೊನಾ

ಉಡುಪಿ ಮೇ.28: ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ಮತ್ತೆ ಸ್ಪೋಟಗೊಂಡಿದೆ. ಉಡುಪಿಯಲ್ಲಿ ಇಂದು 27 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ, ಮಹಾರಾಷ್ಟ್ರದ್ದೇ ಸಿಂಹಪಾಲು ಆಗಿದ್ದು ಮುಂಬೈ ಸೇರಿ ಆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 24 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 147 ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಿಂದ ಬಂದ 24 ಜನರಲ್ಲಿ ಸೋಂಕು ಕಾಣಿಸಿದ್ದರೆ, ತೆಲಂಗಾಣದಿಂದ ಬಂದ ಇಬ್ಬರು ಹಾಗೂ ಕೇರಳದಿಂದ ಬಂದ ಒಬ್ಬರಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ಉಡುಪಿಯ ಇಂದಿನ ಸೊಂಕಿತರಲ್ಲಿ ಒಟ್ಟು 18 ಪುರುಷರು, 8 ಮಹಿಳೆಯರು ಮತ್ತು ಒಂದು ಹೆಣ್ಣು ಮಗುವಿನಲ್ಲಿ ಸೋಂಕು ದೃಢಪಟ್ಟಿದೆ. ವಿಶೇಷ ಅಂದ್ರೆ, ಈವರೆಗೆ ಮಹಾರಾಷ್ಟ್ರ ದಿಂದ ಉಡುಪಿಗೆ ಬಂದ 122 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ.

Facebook Comments

comments