LATEST NEWS
ಗಂಡನ ಮನೆಗೆ ತೆರಳುವ ಸಂದರ್ಭ ಬಿಕ್ಕಿಬಿಕ್ಕಿ ಅತ್ತ ನವವಧುವಿಗೆ ಹೃದಯಾಘಾತ

ಓಡಿಶಾ : ಮದುವೆ ದಿನ ತನ್ನ ತಂದೆ ತಾಯಿಯನ್ನು ಬಿಟ್ಟು ಗಂಡನ ಮನೆಗೆ ಹೋರಡುವ ಸಂದರ್ಭ ಗಳಗಳನೆ ಅತ್ತ ನವವಧು, ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಓಡಿಶಾದ ಸೋನೆಪುರದಲ್ಲಿ ನಡೆದಿದೆ.
ಮೃತಪಟ್ಟ ನವವಧುವನ್ನು ರೋಸಿ ಸಾಹು ಎಂದು ಗುರುತಿಸಲಾಗಿದ್ದು, ಜುಲಂಡಾ ಗ್ರಾಮದ ನಿವಾಸಿಯಾಗಿದ್ದ ಯುವತಿ ಟೆಂಟಲು ಗ್ರಾಮದ ಬಿಸಿಕೇಶನ್ ಎಂಬ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಡಲಾಗಿತ್ತು.

ಮದವೆಯಾಗಿರುವ ರೋಸಿಯನ್ನು ಗಂಡನ ಮನೆಗೆ ಕಳುಹಿಸುವ ಶಾಸ್ತ್ರವನ್ನು ಮಾಡಲಾಗುತ್ತಿತ್ತು. ಈ ವೇಳೆ ರೋಸಿ ತವರು ಮನೆಯಿಂದ ಪತಿಯ ಮನೆಗೆ ಹೋಗಬೇಕು ಎಂದು ಕಣ್ಣಿರು ಹಾಕಿದ್ದಾಳೆ. ಈ ವೇಳೆ ಹೃದಯಾಘಾತದಿಂದ ನಿಂತಲ್ಲೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಅಲ್ಲಿ ಇದ್ದವರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿ ಆಸ್ಪತ್ರೆಗೆ ಕರೆತರುವ ಮೊದಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಮದುವೆ ಸಂಭ್ರಮದಲ್ಲಿ ಇರಬೇಕಾದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.