Connect with us

    LATEST NEWS

    ಬ್ರಹ್ಮಗಿರಿಯಲ್ಲಿ ಕಾರು ಮತ್ತು ಬೈಕ್ ಮೇಲೆ ಉರಳಿ ಬಿದ್ದ ಭಾರಿ ಮರ

    ಉಡುಪಿ ಜುಲೈ 09: ಬೃಹತ್ ಗಾತ್ರದ ಮರವೊಂದು ಬುಡ ಸಮೇತ ರಸ್ತೆಗೆ ಉರುಳಿಬಿದ್ದ ಘಟನೆ ಬ್ರಹ್ಮಗಿರಿಯಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಕಾರು ಮತ್ತು ಬೈಕ್ ನಲ್ಲಿ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ.


    ಬ್ರಹ್ಮಗಿರಿ ಅಂಬಲವಾಡಿ ರಸ್ತೆಯಲ್ಲಿರುವ ಬೃಹತ್ ಗಾತ್ರದ ಮರ ಇದಾಗಿದ್ದು, ಮಳೆ ಅಬ್ಬರಕ್ಕೆ ಧರೆಗುರುಳಿದೆ. ಘಟನೆ ಸಂದರ್ಭ ಬೈಕ್ ಹಾಗೂ ಕಾರೊಂದು ಇದೇ ಮಾರ್ಗದಲ್ಲಿ ಸಂಚರಿಸುತ್ತಿತ್ತು, ಆದರೆ ಕೂದಲೆಳೆ ಅಂತರದಲ್ಲಿ ಎರಡು ವಾಹನಗಳ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಬೈಕ್ ಹಾಗೂ ಕಾರು ಜಖಂಗೊಂಡಿದ್ದು, ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದೆ.


    ಬ್ರಹ್ಮಗಿರಿ ಅಂಬಲಪಾಡಿ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಸ್ಥಗಿತಗೊಂಡಿದ್ದು ,ಸ್ಥಳಕ್ಕೆ ಆಗಮಿಸಿರುವ ಟ್ರಾಫಿಕ್ ಪೊಲೀಸರು ಸ್ಥಳೀಯರೊಂದಿಗೆ ಮರ ತೆರವಿಗೆ ಕೈ ಜೋಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply