Connect with us

LATEST NEWS

ಬಸ್ ಅಡಿ ಬಿದ್ದು ಸೈಕಲ್ ಪುಡಿಯಾದರೂ ಬದುಕುಳಿದ ಬಾಲಕ…ವಿಡಿಯೋ ವೈರಲ್

ಕೇರಳ : ಕೆಲವೇ ಸೆಕೆಂಡ್ ಗಳಲ್ಲಿ ಸಾವಿನ ದವಡೆಯಿಂದ ಪಾರಾದ ಬಾಲಕನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆ ಬದಿಯಲ್ಲಿ ಮಕ್ಕಳು ಆಟ ಆಡುವಾಗ ಅವರ ಬಗ್ಗೆ ನಿಗಾ ಇಡುವುದು ಬಹಳ ಮುಖ್ಯ ಎನ್ನುವುದು ಎಷ್ಟು ಮುಖ್ಯ ಎನ್ನುವುದು ಈ ವಿಡಿಯೋ ನೋಡಿದಾಗ ತಿಳಿಯುತ್ತದೆ.


ಭೀಕರ ಅಪಘಾತವೊಂದರ 15 ಸೆಕೆಂಡಿನ ದೃಶ್ಯವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೇರಳದ ಕಣ್ಣೂರಿನ ತಳಿಪರಂಬಾಜ್ ಬಳಿಯ ಚೋರುಕಲಾ ಎಂಬಲ್ಲಿ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಸಹಜವಾಗಿಯೇ ನೆಟ್ಟಿಗರನ್ನು ಬೆಚ್ಚಿಬೀಳುವಂತೆ ಮಾಡಿದೆ. ಈ ಸನ್ನಿವೇಶವನ್ನು ಕಂಡಾಗ ಸಿನಿಮಾ ದೃಶ್ಯಗಳು ನೆನಪಾದರೂ ಅಚ್ಚರಿಯೇನೂ ಇಲ್ಲ. ಸದ್ಯ ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ.


ಸೈಕಲ್‌ನಲ್ಲಿ ವೇಗವಾಗಿ ಬರುವ ಬಾಲಕನೊಬ್ಬ ದಿಢೀರ್ ರಸ್ತೆ ದಾಟುತ್ತಾನೆ. ಅಷ್ಟರಲ್ಲಿ ಈತನ ಸೈಕಲ್ ಬೈಕಿಗೆ ತಾಗಿ ಬಾಲಕ ಹಾರಿ ರಸ್ತೆಯ ಇನ್ನೊಂದು ಬದಿಗೆ ಬೀಳುತ್ತಾನೆ. ಸೈಕಲ್ ಬಸ್ಸಿನಡಿಗೆ ಬಿದ್ದು ಅಪ್ಪಚ್ಚಿಯಾಗುತ್ತದೆ. ಬಸ್ ಚಾಲಕ ಕೂಡಾ ಅಪಘಾತವನ್ನು ತಪ್ಪಿಸಲು ತ್ವರಿತವಾಗಿ ಯತ್ನಿಸುವುದನ್ನೂ ಇಲ್ಲಿ ಗಮನಿಸಬಹುದಾಗಿದೆ. ಬಾಲಕ ಇನ್ನೊಂದು ಬದಿಗೆ ಬೀಳುತ್ತಿದ್ದಂತೆಯೇ ವಾಹನ ಸವಾರರು ತಕ್ಷಣ ಓಡಿ ಬರುವುದು ಕೂಡಾ ಕಾಣಿಸುತ್ತದೆ. ಅದೃಷ್ಟವಶಾತ್ ಬಾಲಕ ಈ ಘಟನೆಯಲ್ಲಿ ಬದುಕಿ ಬಂದಿದ್ದಾನೆ.

Advertisement
Click to comment

You must be logged in to post a comment Login

Leave a Reply