Connect with us

LATEST NEWS

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲೂ ಮುಸ್ಲಿಂ ವ್ಯಾಪಾರ ‌ನಿಷೇಧ ಅಭಿಯಾನ

ಉಡುಪಿ: ರಾಜ್ಯದ ಶ್ರೀಮಂತ ದೇವಸ್ಥಾನದ ವಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಆರಂಭವಾಗಿದ್ದು, ಇಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ಮಳಿಗೆ ಇಡಲು ನಿರ್ಬಂಧ ವಿಧಿಸಲಾಗಿದ್ದು, ಹಿಂದೂ ಸಂಘಟನೆಗಳು ಮುಸ್ಲಿಂ ವ್ಯಾಪಾರ ‌ನಿಷೇಧ ಅಭಿಯಾನವನ್ನು ಇಲ್ಲೂ ಮುಂದುವರೆಸಿದ್ದಾರೆ.


ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ರಾಜ್ಯದ ಎರಡನೆಯ ಅತೀ ದೊಡ್ಡ ಶ್ರೀಮಂತ ದೇವಾಲಯವಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ಜಾತ್ರೋತ್ಸವ ನಡೆಯಲಿದೆ. ಈಗಾಗಲೇ ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ಮುಸ್ಲಿಂ ರಿಗೆ ವ್ಯಾಪಾರಕ್ಕೆ ಅವಕಾಶ ನಿರ್ಬಂಧದ ಅಭಿಯಾನ ಮುಂದುವರೆದಿದ್ದು, ಇದೀಗ ಕೊಲ್ಲೂರಿನಲ್ಲೂ ಮುಂದುವರೆದಿದೆ.


ಕೊಲ್ಲೂರು ಪಂಚಾಯತ್​​ನಿಂದ ವ್ಯಾಪಾರ ಪರವಾನಿಗೆ ನೀಡಿಲ್ಲ. ದೇವಸ್ಥಾನ ವಠಾರದಲ್ಲಿ ಹಿಂದೂ ವ್ಯಾಪಾರಿಗಳಿಗೆ ಅವಕಾಶ ನೀಡಿದ್ದು, ಕೊಲ್ಲೂರು ಮೂಕಾಂಬಿಕ ದೇಗುಲ ಬಳಿಯಿರುವ ಹಿಂದೂಗಳ ಅಂಗಡಿಗಳ ಮೇಲೆ ವಿಹೆಚ್‌ಪಿ ಕಾರ್ಯಕರ್ತರು ಕೇಸರಿ ಬಾವುಟ ಅಳವಡಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಭದ್ರತೆಗಾಗಿ ಪೊಲೀಸರ ನಿಯೋಜನೆ ಕೂಡ ಮಾಡಲಾಗಿದೆ. ಜಾತ್ರೆಗೆ ಮುಸ್ಲಿಂ ‌ವ್ಯಾಪಾರಿಗಳಿಗೆ ನಿರ್ಬಂಧವಿದಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರಿಂದ ತಯಾರಿ ನಡೆಸಿದ್ದು, ಸ್ಥಳದಲ್ಲಿ 60ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ನಿಯೋಜನೆಗೊಂಡಿದ್ದಾರೆ.

Advertisement
Click to comment

You must be logged in to post a comment Login

Leave a Reply