Connect with us

    LATEST NEWS

    ಕೊರೊನಾ ಪ್ರಕರಣ ಹಿನ್ನಲೆ ಮಂಗಳೂರಿನ ಬೋಳೂರು ಸುತ್ತಮುತ್ತ ಸಂಪೂರ್ಣ ಸೀಲ್ ಡೌನ್

    ಕೊರೊನಾ ಪ್ರಕರಣ ಹಿನ್ನಲೆ ಮಂಗಳೂರಿನ ಬೋಳೂರು ಸುತ್ತಮುತ್ತ ಸಂಪೂರ್ಣ ಸೀಲ್ ಡೌನ್

    ಮಂಗಳೂರು ಎಪ್ರಿಲ್ 30: ಮಂಗಳೂರಿನ ಬೋಳೂರು ನಿವಾಸಿಯೊಬ್ಬರಲ್ಲಿ ಕೊರೊನಾ ಸೊಂಕು ದೃಢಪಟ್ಟ ಹಿನ್ನಲೆ ಮಹಿಳೆಯ ಮನೆಯ ಸುತ್ತಮುತ್ತ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು, ಯಾರೂ ಹೊರಗಡೆ ಬರದಂತೆ ಎಚ್ಚರಿಕೆ ನೀಡಲಾಗಿದೆ.

    ಈ ವ್ಯಾಪ್ತಿಯಲ್ಲಿ ಸುಮಾರು 135ಕ್ಕೂ ಅಧಿಕ ಮನೆಗಳಿದ್ದು 640 ಮಂದಿ ಜನ ವಾಸವಿದ್ದಾರೆ. ಇವರೆಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿ 12 ಅಂಗಡಿ ಮುಂಗಟ್ಟುಗಳಿವೆ. ಪೂರ್ವಕ್ಕೆ ಜೇಮ್ಸ್ ಡಿ ಸೋಜಾ ನಿವಾಸ, ಪಶ್ಚಿಮಕ್ಕೆ ಹಿಂದೂ ರುದ್ರ ಭೂಮಿ ಬೋಳೂರು, ಉತ್ತರಕ್ಕೆ ಬಿ.ಜೆ ಹೋಟೇಲ್ ಶ್ರೀ ವಿನಾಯ ಹೋಟೇಲ್ ಸುಲ್ತಾನ್ ಬತ್ತೇರಿ ಹಾಗೂ ದಕ್ಷಿಣಕ್ಕೆ ಹಿಂದೂ ರುದ್ರ ಭೂಮಿ, ಬೋಳೂರು ಎಂಟ್ರೆನ್ಸ್ ರಸ್ತೆ ಸುಲ್ತಾನ್ ಬತ್ತೇರಿ ಈ ವ್ಯಾಪ್ತಿ ಪ್ರದೇಶವೂ ಸೀಲ್ ಡೌಲ್ ಗೆ ಒಳಪಡುತ್ತದೆ.

    ಬೋಳೂರಿನ ಸುತ್ತಮುತ್ತಲಿನ 5 ಕಿಲೋ ಮೀಟರ ನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ 16350 ಮನೆ, 1275ಅಂಗಡಿ ಮುಂಗಟ್ಟು, 79,800 ಜನಸಂಖ್ಯೆ ಈ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಬಫರ್ ಝೋನ್ ವ್ಯಾಪ್ತಿಗೆ ಪೂರ್ವಕ್ಕೆ ಬೊಂದೇಲ್, ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ಉತ್ತರಕ್ಕೆ ಎಮ್ ಸಿ ಎಫ್ ರಾಷ್ಟ್ರೀಯ ಹೆದ್ದಾರಿ, ದಕ್ಷಿಣಕ್ಕೆ ನೇತ್ರಾವತಿ ನದಿ ಬೋಳಾರ್ ತನಕ ಒಳಪಡುತ್ತದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *