FILM
ತಾಯಿಯಾಗುತ್ತಿರುವ ಖ್ಯಾತ ನಟಿ ದೀಪಿಕಾ ಪಡುಕೋಣೆ
ಮುಂಬೈ ಫೆಬ್ರವರಿ 29: ಬಾಲಿವುಡ್ ನ ಖ್ಯಾತ ನಟಿ, ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಇದೀಗ ತಮ್ಮ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ದಂಪತಿ ಈ ವರ್ಷ ಸೆಪ್ಟೆಂಬರ್ನಲ್ಲಿ ಮಗುವಿಗೆ ದೀಪಿಕಾ ಜನ್ಮ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಚಿತ್ರದಲ್ಲಿ ಯಾವುದೇ ಕ್ಯಾಪ್ಷನ್ ಇಲ್ಲ. ಮಗುವಿಗೆ ಸಂಬಂಧಿಸಿದ ಬಟ್ಟೆ, ಶೂ, ಆಟಿಕೆ, ಟೋಪಿ ಮುಂತಾದ ವಸ್ತುಗಳಿರುವ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ. ‘ಸೆಪ್ಟೆಂಬರ್ 2024 ’ ಎಂದು ಇದರಲ್ಲಿ ಬರೆಯಲಾಗಿದೆ. ಈ ದಂಪತಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಈಗ ದೀಪಿಕಾ ಪಡುಕೋಣೆ ಅವರು ಎರಡು ತಿಂಗಳ ಗರ್ಭಿಣಿ. ಇದೇ ವರ್ಷ ಸೆಪ್ಟೆಂಬರ್ನಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಸದ್ಯಕ್ಕೆ ಚಿತ್ರರಂಗದಲ್ಲಿ ಅವರು ತುಂಬ ಬೇಡಿಕೆ ಹೊಂದಿದ್ದಾರೆ. ಆದರೆ ಈಗ ಮಗು ಸಲುವಾಗಿ ಬ್ರೇಕ್ ತೆಗೆದುಕೊಳ್ಳಲಿದ್ದಾರೆ.
You must be logged in to post a comment Login