Connect with us

FILM

ಬಾಲಿವುಡ್‌ನ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಶವವಾಗಿ ಪತ್ತೆ!

Share Information

ಮುಂಬೈ, ಜುಲೈ 02: ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಮುಂಬೈನ ಕರ್ಜಾತ್‌ನಲ್ಲಿರುವ ಅವರ ಎನ್‌ಡಿ ಸ್ಟುಡಿಯೋದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಲಗಾನ್ ಮತ್ತು ಜೋಧಾ ಅಕ್ಬರ್‌ನಲ್ಲಿನ ಕೆಲಸಕ್ಕಾಗಿ ಅವರು ಹೆಚ್ಚು ಖ್ಯಾತಿ ಗಳಿಸಿದ್ದರು. ತಮ್ಮ 20 ವರ್ಷಗಳ ವೃತ್ತಿಜೀವನದಲ್ಲಿ ನಿತಿನ್ ದೇಸಾಯಿ ಅವರು ಅನುಭವಿ ಚಿತ್ರ ನಿರ್ದೇಶಕರಾದ ಅಶುತೋಷ್ ಗೋವಾರಿಕರ್, ವಿಧು ವಿನೋದ್ ಚೋಪ್ರಾ, ರಾಜ್‌ಕುಮಾರ್ ಹಿರಾನಿ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಕೆಲಸ ಮಾಡಿದ್ದರು.

1942: ಎ ಲವ್ ಸ್ಟೋರಿ, ಹಮ್ ದಿಲ್ ದೇ ಚುಕೆ ಸನಮ್ (1999), ದೇವದಾಸ್ (2002) ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ (2010)ನಂತಹ ಐಕಾನಿಕ್ ಬಾಲಿವುಡ್ ಚಲನಚಿತ್ರಗಳ ಸೆಟ್‌ಗಳ ಹಿಂದೆ ಅವರ ಕೈಚಳಕ ಅಡಗಿತ್ತು.

ಕಲಾ ನಿರ್ದೇಶಕರಾಗಿ ಅವರು ಕೆಲಸ ಮಾಡಿದ ಕೊನೆಯ ಚಿತ್ರ 2019ರಲ್ಲಿ ಬಿಡುಗಡೆಯಾದ ಪಾಣಿಪತ್. ಈ ಚಿತ್ರವನ್ನು ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ್ದರು.


Share Information
Advertisement
Click to comment

You must be logged in to post a comment Login

Leave a Reply