FILM
ಬಾಲಿವುಡ್ ನಿರ್ದೇಶಕರಲ್ಲಿ ಸ್ವಂತ ಯೋಚನೆ ಇಲ್ಲ: ನೀಲ್ ನಿತಿನ್ ಮುಖೇಶ್

ಮುಂಬೈ, ಜುಲೈ 04: ಭಾರತೀಯ ಚಿತ್ರರಂಗ ಅಂದರೆ ಬಾಲಿವುಡ್ ಅಂತಾ ಬಿಂಬಿಸುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಾಲಿವುಡ್‌ಗೆ ಸೆಡ್ಡು ಹೊಡೆದು ದಕ್ಷಿಣ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡುತ್ತಿದೆ. ಈ ಬೆನ್ನಲ್ಲೇ ಬಾಲಿವುಡ್ ಸಿನಿಮಾ ನಿರ್ದೇಶಕರನ್ನು ನಟ ನೀಲ್ ನಿತಿನ್ ಮುಖೇಶ್ ಟೀಕಿಸಿದ್ದಾರೆ. ಹಿಂದಿ ನಿರ್ದೇಶಕರಿಗೆ ಸ್ವಂತ ಯೋಚನೆ ಇಲ್ಲ ಅಂತಾ ಟಾಂಗ್ ಕೊಟ್ಟಿದ್ದಾರೆ.
ಬಿಟೌನ್ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನೀಲ್ ನಿತಿನ್ ಮುಖೇಶ್ ಈಗ ಬಾಲಿವುಡ್ ನಿರ್ದೇಶಕರಿಗೆ ಟಾಂಗ್ ನೀಡಿದ್ದಾರೆ. ಬೇರೆ ಭಾಷೆಗಳ ಸಿನಿಮಾಗಳನ್ನ ರಿಮೇಕ್ ಮಾಡುವ ಬದಲು ಸ್ವಂತ ಐಡಿಯಾಯಿಂದ ಸಿನಿಮಾ ಮಾಡಿ ಅಂತಾ ಟೀಕಿಸಿದ್ದಾರೆ.

ಬಾಲಿವುಡ್‌ನಲ್ಲಿ ಓರಿಜಿನಲ್ ಸಿನಿಮಾಗಿಂತ ರಿಮೇಕ್ ಸಿನಿಮಾಗಳನ್ನೇ ಮಾಡುವುದು ವಾಡಿಕೆಯಾಗಿದೆ. ಓರಿಜಿನಲ್ ಕಂಟೆಂಟ್ ಚಿತ್ರಗಳು ಬಾಲಿವುಡ್ ರಂಗದಲ್ಲಿ ಸೌಂಡ್ ಮಾಡಿರುವುದು ತೀರಾ ವಿರಳ. ನಮ್ಮಲ್ಲೂ ಪ್ರಯೋಗಾತ್ಮಕ ಚಿತ್ರಗಳು ಬರಬೇಕು ಆದರೆ ಬಾಲಿವುಡ್ ನಿರ್ದೇಶಕರಲ್ಲಿ ಸ್ವಂತ ಯೋಚನೆ ಇಲ್ಲ. ರಿಮೇಕ್ ಸಿನಿಮಾಗಳ ಹಿಂದೆ ಬೀಳುತ್ತಾರೆ ಇದು ಬದಲಾಗಬೇಕು ಎಂದು ನಟ ನೀಲ್ ನಿತಿನ್ ಮಾತನಾಡಿರುವುದು ಈಗ ಸಂಚಲನ ಮೂಡಿಸುತ್ತಿದೆ.