Connect with us

    LATEST NEWS

    ಕಣಿವೆಗೆ ಬಿದ್ದ ಶಾಲಾ ಬಸ್ – ಮಕ್ಕಳು ಸೇರಿ 16 ಮಂದಿ ದುರ್ಮರಣ

    ಶಿಮ್ಲಾ, ಜುಲೈ 04: ಶಾಲಾ ಬಸ್ ಕಣಿವೆಗೆ ಉರುಳಿ ಮಕ್ಕಳು ಸೇರಿದಂತೆ  ಸುಮಾರು 16 ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ನಡೆದಿದೆ.

    ಸೇಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬಸ್ ಕುಲುವಿನಿಂದ ಸೈನ್ಜ್ ಕಡೆಗೆ ಸಾಗುತ್ತಿತ್ತು. ನಿಯೋಲಿ-ಶಂಶೇರ್ ಕಣಿವೆ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಬಸ್ ಕಣಿವೆಗೆ ಉರುಳಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಿದ್ದು, ಗಂಭೀರ ಗಾಯಗಳಾಗಿರುವವರೂ ಇರುವ ಕಾರಣ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

    ಅಪಘಾತದ ಮಾಹಿತಿ ಸಿಗುತ್ತಲೇ ಕುಲು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.ಈ ನಡುವೆ ಅಹಿತಕರ ಘಟನೆಗೆ ಪ್ರತಿಕ್ರಿಯಿಸಿದ ಹಿಮಾಚಲ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಕುಲುವಿನಲ್ಲಿ ಖಾಸಗಿ ಶಾಲಾ ಬಸ್ ಕಣಿವೆಗೆ ಬಿದ್ದಿರುವ ಸುದ್ದಿ ತಿಳಿದು ಬಂದಿದೆ.

    ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಅಗಲಿದ ಆತ್ಮಗಳಿಗೆ ಶಾಂತಿ ಹಾಗೂ ದುಃಖತಪ್ತ ಕುಟುಂಬಗಳಿಗೆ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply