Connect with us

    FILM

    ಬಾಲಿವುಡ್ ನಲ್ಲಿ ಮತ್ತೊಂದು ಆತ್ಮಹತ್ಯೆ ..ಖ್ಯಾತ ನಟ ಆಸಿಫ್ ಬಸ್ರಾ ನೇಣಿಗೆ ಶರಣು

    ನವದೆಹಲಿ ನವೆಂಬರ್ 12 : ಕೊರೊನಾ ಲಾಕ್ ಡೌನ್ ನಿಂದಾಗಿ ಭಾರತೀಯ ಚಲನಚಿತ್ರ ರಂಗದಲ್ಲಿ ಪ್ರಮುಖರ ಆತ್ಮಹತ್ಯಾ ಸರಣಿ ಮುಂದುವರೆದಿದೆ. ಈಗಾಗಲೇ ದೇಶದ ವಿವಿಧ ಭಾಷೆಗಳ ನಟ-ನಟಿಯವರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಬಾಲಿವುಡ್ ನಲ್ಲಿ ಮತ್ತೊಂದು ಆತ್ಮಹತ್ಯೆಯಾಗಿದ್ದು, ಇದೀಗ ಬಾಲಿವುಡ್ ನಟ ಆಸಿಫ್ ಬಸರಾ ನೇಣಿಗೆ ಶರಣಾಗಿದ್ದಾರೆ


    ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಬಾಸ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಇವರು ಐದು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹಿಮಾಚಲ ಪ್ರದೇಶದ ಮೆಕ್ಲಿಯಾಡ್ಗಂಜ್​ ಎಂಬಲ್ಲಿ ಸ್ನೇಹಿತೆಯ ಜತೆಗೆ ಲಿವ್​ ಇನ್​ ರಿಲೇಷನ್​ನಲ್ಲಿ ಇದ್ದರು ಎನ್ನಲಾಗಿದೆ. ಇಂಗ್ಲೇಂಡ್​ ಮೂಲಕ ಮಹಿಳೆಯ ಜತೆ ಇದೇ ಮನೆಯಲ್ಲಿ ಮೊದಲಿನಿಂದಲೂ ಇವರು ವಾಸವಾಗಿದ್ದರು.

    ಇವರು ಇತ್ತೀಚೆಗೆ ನಿಗೂಢವಾಗಿ ಮೃತಪಟ್ಟಿರುವ ನಟ ಸುಶಾಂತ್​ ರಜಪೂತ್​ ಜತೆ ಕಾಯ್​ ಪೂಚೆ ಸಿನಿಮಾದಲ್ಲಿ ನಟನೆ ಮಾಡಿ ಪ್ರಸಿದ್ಧಿ ಪಡೆದಿದ್ದರು. ​ ಇದರ ಜತೆಗೆ ಕೆಲವು ಹಿರಿತೆರೆ, ಕಿರುತೆರೆಗಳಲ್ಲಿಯೂ ನಟಿಸಿದ್ದಾರೆ. ಮಾತ್ರವಲ್ಲದೇ ಹಾಲಿವುಡ್​ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ತಮಿಳು ಸಿನೆಮಾ ಅಂಜಾನ್ ನಲ್ಲಿ ಸೂರ್ಯ ಜೊತೆ ಕಾಣಿಸಿಕೊಂಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply