DAKSHINA KANNADA
ಪುತ್ತೂರಿನ ಮನೆಯೊಂದರಲ್ಲಿ ಭಾರಿ ಸ್ಪೋಟ ಇಬ್ಬರಿಗೆ ಗಾಯ

ಪುತ್ತೂರಿನ ಮನೆಯೊಂದರಲ್ಲಿ ಭಾರಿ ಸ್ಪೋಟ ಇಬ್ಬರಿಗೆ ಗಾಯ
ಪುತ್ತೂರು ಸೆಪ್ಟೆಂಬರ್ 28 : ಮನೆಯೊಂದರಲ್ಲಿ ಭಾರಿ ಸ್ಪೋಟ ಸಂಭವಿಸಿ ಇಬ್ಬರಿಗೆ ಗಾಯವಾದ ಘಟನೆ ಪುತ್ತೂರಿನ ಪಾಣಾಜೆ ಸಮೀಪದ ಕಂಚಿನಕುಂಜ ಎಂಬಲ್ಲಿ ನಡೆದಿದೆ.

ಸಾಂಧರ್ಭಿಕ ಚಿತ್ರ
ಪುತ್ತೂರಿನ ಪಾಣಾಜೆ ಸಮೀಪದ ಕಂಚಿನಕುಂಜ ಪ್ರದೇಶದ ಮನೆಯೊಂದರಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದ ಸ್ಪೋಟಕ ಇರಿಸಲಾಗಿದೆ ಎಂದು ಹೇಳಲಾಗಿದೆ. ಯಾವ ಉದ್ಧೇಶಕ್ಕಾಗಿ ಸ್ಫೋಟಕ ಇರಿಸಲಾಗಿದೆ ಎನ್ನುವ ಬಗ್ಗೆ ಮಾಹಿತಿ ದೊರೆತಿಲ್ಲ. ಸ್ಥಳಕ್ಕೆ ಸಂಪ್ಯ ಪೋಲೀಸರ ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.
