BANTWAL
ರಮಾನಾಥ ರೈ ಬೆಂಬಲಿಗನಿಂದ ಹಾಡು ಹಗಲೇ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಯತ್ನ

ರಮಾನಾಥ ರೈ ಬೆಂಬಲಿಗನಿಂದ ಹಾಡು ಹಗಲೇ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಯತ್ನ
ಬಂಟ್ವಾಳ ಜೂನ್ 11: ಮಾಜಿ ಸಚಿವ ಬಿ.ರಮಾನಾಥ ರೈ ಬೆಂಬಲಿಗನೋರ್ವ ಹಾಡು ಹಗಲೇ ಬಿಜೆಪಿ ಕಾರ್ಯಕರ್ತರ ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳ ಪೇಟೆಯ ನಿತ್ಯಾನಂದ ಮಂದಿರದ ಬಳಿ ನಡೆದಿದೆ.
ಸುರೇಂದ್ರ ಬಂಟ್ವಾಳ್ ಎನ್ನುವ ಈತ ಲಾಂಗ್ ಹಿಡಿದು ಬಿಜೆಪಿ ಕಾರ್ಯಕರ್ತರ ಕೊಲೆಗೆ ಯತ್ನಿಸಿದ್ದಾನೆ.

ಹಾಡು ಹಗಲೇ ಲಾಂಗನ್ನು ಬೀಸಿದ ಈತನ ದಾಳಿಗೆ ಸಿಲುಕಿ ಅಪಾಯಕ್ಕೆ ತುತ್ತಾಗುತ್ತಿದ್ದ ಗಣೇಶ್ ಮತ್ತು ಪುಷ್ಪರಾಜ್ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಘಟನೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.