Connect with us

  DAKSHINA KANNADA

  ಪುತ್ತೂರಿನಲ್ಲಿ ಗೂಂಡಾ ಸಾಮ್ರಾಜ್ಯಕ್ಕೆ ಬಿಜೆಪಿ ಅವಕಾಶ ಕೊಡುವುದಿಲ್ಲ: ಡಿ.ವಿ.ಸದಾನಂದ ಗೌಡ

  ಪುತ್ತೂರು, ಮೇ 02: ಪುತ್ತೂರಿನಲ್ಲಿ ಒಂದು ಕಾಲದಲ್ಲಿ ರೌಡಿಗಳ ಕೂಟವಿತ್ತು. ಪುತ್ತೂರನ್ನು ಗೂಂಡಾ ಸಾಮ್ರಾಜ್ಯ ಆಳುತ್ತಿತ್ತು.
  ಅಂಥ ಪುತ್ತೂರಿನಲ್ಲಿ ಸಾಮಾನ್ಯನಿಗೆ ಓಡುವ ವ್ಯವಸ್ಥೆ ಮಾಡಿದ್ದು ಬಿಜೆಪಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು.

  ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಪ್ರಚಾರಕ್ಕೆ ಪುತ್ತೂರಿಗೆ ಆಗಮಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಪುತ್ತೂರು ಮಾಜಿ ಶಾಸಕರೂ ಆಗಿರುವ ಡಿವಿಎಸ್ ಪುತ್ತೂರಿನ ಅಂದಿನ ಸ್ಥಿತಿಯನ್ನು ಮಾದ್ಯಮಗಳಿಗೆ ವಿವರಿಸಿದರು. ಪುತ್ತೂರಿನ ಈಶ್ವರಮಂಗಲ ಎನ್ನುವ ಪ್ರದೇಶ ಮಿನಿ ಪಾಕಿಸ್ತಾನದಂತಿತ್ತು.

  ಅಂಥ ವ್ಯವಸ್ಥೆಯನ್ನು ಬಿಜೆಪಿ ಬದಲಿಸಿದೆ. ಆ ಸಮಯದಲ್ಲಿ ನನ್ನ ಮೇಲೆ 101 ಕೇಸಿತ್ತು, ಆ ಬಳಿಕ ಶಾಸಕನಾಗಿದ್ದಾಗ 3 ಕೇಸ್ ಇತ್ತು. ಈಗ ಅದೇ ರೀತಿಯ ಗೂಂಡಾರಾಜ್ಯ ಸ್ಥಾಪನೆಗೆ ಕಾಂಗ್ರೆಸ್ ಮತ್ತು ಸ್ವಯಂ ಘೋಷಿತ ಹಿಂದೂ ಮುಖಂಡರಾದ ಪಕ್ಷೇತರ ಅಭ್ಯರ್ಥಿ ಮಾಡಲು ಹೊರಟಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ನನ್ನ ಮಿತ್ರರಾಗಿದ್ದರು. ಬಿಜೆಪಿಯಲ್ಲಿ ಯಾರಲ್ಲಾ ಎಷ್ಟು ಸಮಯ ಇರ್ತಾರೆ ಅಲ್ಲಿಯವರೆಗೆ ನಾನು ಅವರ ಆಪ್ತಮಿತ್ರ, ಪಾಲುದಾರರು.

  ನನ್ನ ಪಕ್ಷನಿಷ್ಟೆಯ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಕೇಂದ್ರ ಕ್ಯಾಬಿನೆಟ್ ರಿಶಫಲ್ ಮಾಡುವಾಗ ನನಗೆ ಪಕ್ಷಕ್ಕಾಗಿ ದುಡಿಯುವಂತೆ ಸೂಚಿಸಿದ್ದಾರೆ. ಅದನ್ನೇ ಈಗ ಮಾಡುತ್ತಿದ್ದೇನೆ. ಬಿಜೆಪಿ ನನ್ನನ್ನು ಮುಖ್ಯಮಂತ್ರಿ, ಕೇಂದ್ರ ಸಚಿವ, ಪಕ್ಷದ ಅಧ್ಯಕ್ಷ ಹೀಗೆ ಎಲ್ಲವನ್ನೂ ಮಾಡಿದೆ. ಇಷ್ಟೆಲ್ಲಾ ಕೊಟ್ಟ ಪಕ್ಷದ ವಿರುದ್ಧ ಸಂತೃಪ್ತನಾಗದಿರಲು ನಾನು ಪ್ರಾಣಿಯಾ,ಮನುಷ್ಯನಾ‌ ಎಂದ ಅವರು ಎಲ್ಲಿ ಮಹಿಳೆಯರು ಹೆಚ್ಚಾಗಿದ್ದಾರೋ ಅಲ್ಲಿ ಮಹಿಳೆಯರಿಗೆ ಅವಕಾಶ ನೀಡಿದೆ.

  ಉಡುಪಿ,ದ.ಕ ದಲ್ಲಿ ಮೂವರು ಮಹಿಳೆಯರಿಗೆ ಅವಕಾಶ ನೀಡುವ ಯೋಚನೆಯಿತ್ತು. ಆದರೆ ಪುತ್ತೂರು ಮತ್ತು ಸುಳ್ಯದಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಪಕ್ಷದಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಕಾಂಗ್ರೆಸ್ ಹೋಗೋದು, ಹಿಂದೂ ಮುಖಂಡನಾಗಿ ಪಕ್ಷೇತರ ನಿಲ್ಲೋದು ಆದರ್ಶವಲ್ಲ. ನನಗೆ ಸೀಟ್ ಸಿಕ್ಕಿಲ್ಲ ಅಂತ ಇನ್ನೊಂದು ಪಾರ್ಟಿಯಲ್ಲಿ ನಿಲ್ಲೋದು ಆದರ್ಶ ಅಲ್ಲ. ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಯಲ್ಲಿದ್ದಾಗ ಸೆನೆಟ್ ಮೆಂಬರ್ ಆಗಿ ಮಾಡಲಾಗಿತ್ತು. ಸಾವಿರಾರು ಕಾರ್ಯಕರ್ತರಿಗೆ ಸಿಗದ ಅವಕಾಶ ಅವರಿಗೆ ನೀಡಲಾಗಿತ್ತು.ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಯ ಷಡ್ಯಂತ್ರಕ್ಕೆ ಬಿಜೆಪಿ ಯಾವತ್ತೂ ಬಲಿಯಾಗಲ್ಲ.
  ನನ್ನ ಮೇಲೆ ಜೀವನ ಪೂರ್ತಿ ಅವಪ್ರಚಾರ ಮಾಡಲಾಗಿದೆ.

  ಎತ್ತಿನಹೊಳೆ ಯೋಜನೆ ಮೂಲಕ 1300 ಟಿಎಂಸಿ ಸಮುದ್ರಕ್ಕೆ ಹೋಗುವ ನೀರನ್ನು ಮಳೆಗಾಲದಲ್ಲಿ ಬಳಸಲು ತೀರ್ಮಾನಿಸಿದೆ. 23 ಟಿಎಂಸಿ ನೀರನ್ನು ನೀರಿಲ್ಲದ ಭಾಗಕ್ಕೆ ಕಳಿಸುವ ಯೋಜನೆ ಕೈಗೆತ್ತಿಕೊಂಡೆ. ನೀರಿಲ್ಲದವರಿಗೆ ನೀರು ಕೋಡೋದು ತಪ್ಪಾ ಎಂದು ಪ್ರಶ್ನಿಸಿದ ಅವರು ಕಳೆದ ಹತ್ತು ದಿನಗಳಿಂದ ಪಯಸ್ವಿನಿ,ಕುಮಾರಧಾರಾ,ನೇತ್ರಾವತಿ ನದಿಗಳು ನೀರಿಲ್ಲದೆ ಬತ್ತಿವೆ.
  ಅದಕ್ಕೆ ಸದಾನಂದ ಗೌಡ ಕಾರಣವಾ ಎಂದ ಅವರು

  ಎತ್ತಿನಹೊಳೆ ಇನ್ನೂ ಸ್ಟಾರ್ಟ್ ಆಗಿಲ್ಲ ಎಂದರು. ಸದಾನಂದ ಗೌಡರ ಬೇನಾಮಿ ಆಸ್ತಿ ಅಶೋಕ ರೈ ಯಲ್ಲಿದೆ ಎನ್ನುವ ಆರೋಪ ಮಾಡಲಾಗುತ್ತಿದೆ.ಅಂತಹ ಹಣ ಇದ್ದಲ್ಲಿ ಸರಕಾರ ತನಿಖೆ ಮಾಡಿ ಅದನ್ನು ಮುಟ್ಟುಗೋಲು ಹಾಕಲಿ. ನಾನು ಅದನ್ನು ಸ್ವಾಗತ ಮಾಡುತ್ತೇನೆ. ಪಕ್ಷದಲ್ಲಿದ್ದಾಗ ಮಿತ್ರ, ಕಾಂಗ್ರೆಸ್ ಗೆ ಹೋದಾಗ ಶತ್ರು ಆತ ನನಗೆ ಶತ್ರುವೇ. ನನ್ನ ಮತ್ತು ಕಾಂಗ್ರೇಸ್ ಅಭ್ಯರ್ಥಿಯ ನಡುವೆ ಒಳ ಒಪ್ಪಂದವಿದ್ದರೆ ಯಾವುದೇ ರಹಸ್ಯ ಇಲಾಖೆಯಿಂದ ತನಿಖೆ ಮಾಡಲಿ ಎಂದರು.

  ಅರುಣ್ ಪುತ್ತಿಲರಿಗೆ ಡಾ.ಪ್ರಸಾದ್ ಭಂಡಾರಿ, ಪ್ರಭಾಕರ ಭಟ್ ದೇವರಂತಿದ್ದರು. ಈಗ ಅವರ ಸ್ವಾರ್ಥಕ್ಕೆ ಅವರನ್ನು ಬೆಂಬಲಿಸದಾಗ ಇಬ್ಬರೂ ದೆವ್ವ ಆಗಿದ್ದಾರೆ. ಹಿಂದುತ್ವಕ್ಕೆ ಶಕ್ತಿ ಕೊಟ್ಟದ್ದು ನರೇಂದ್ರ ಮೋದಿ. ಕಾಶಿ, ಅಯೋಧ್ಯೆ ರಾಮಮಂದಿರ ನಿರ್ಮಾಣ , 370 ಹಿಂಪಡೆದದ್ದು ಮೋದಿ ಸರಕಾರ. ಪುತ್ತೂರಿನಲ್ಲಿ ಗೂಂಡಾ ಸಾಮ್ರಾಜ್ಯಕ್ಕೆ ಬಿಜೆಪಿ ಅವಕಾಶ ಕೊಡುವುದಿಲ್ಲ.ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಬಿಜೆಪಿಯಲ್ಲಿ ಕೆಲಸ ಮಾಡಿದ್ದಾರೆ.

  ಆ ಬಳಿಕ ಅವರು ಪುತ್ತೂರಿನಲ್ಲಿ ಶನಿ ಪೂಜೆ ಮಾಡಿದ್ದರು. ಆಗ ಅವರ ಶನಿಯನ್ನು ಬಿಡಿಸಿದ್ದೇವೆ. ಬಿಜೆಪಿ ಅರುಣ್ ಪುತ್ತಿಲ ಮೇಲೆ ಎನ್ ಕೌಂಟರ್ ಮಾಡುವ ಮೊದಲು ದೇಶದಲ್ಲಿ ಭಯೋತ್ಪಾದಕರು ಸಾಕಷ್ಟು ಜನರಿದ್ದಾರೆ.. ಅಂಥವರನ್ನೆಲ್ಲಾ ಎನ್ ಕೌಂಟರ್ ಮಾಡಿದ ಮೇಲೆ ಆ ಬಗ್ಗೆ ಯೋಚಿಸುವ. ದೇಶಕ್ಕೆ ವಿರುದ್ಧವಾದವರು ಯಾರಾದರೂ ಅವರನ್ನು ಎನ್ ಕೌಂಟರ್ ಮಾಡಲಾಗುವುದು. ಬಿಜೆಪಿ ಕಾರ್ಯ ನೋಡಿ ಕಾಂಗ್ರೇಸ್ ಮತ್ತು ಪಕ್ಷೇತರ ಅಭ್ಯರ್ಥಿಗೆ ಆತಂಕ ಶುರುವಾಗಿದೆ.
  ಇಬ್ಬರೂ ಸೇರಿ ಗೆಲುವಿನ ಬಗ್ಗೆ ಸರ್ವೇ ಮಾಡುತ್ತಿದ್ದಾರೆ.

  ಇಬ್ಬರ ನಡುವೆ ಒಳ ಒಪ್ಪಂದ ನಡೆಯುತ್ತಿದೆ. ಸೋಲಿನ ಭೀತಿಯಲ್ಲಿ ಮುಂದಿನ ಎರಡು ಮೂರು ದಿನದಲ್ಲಿ ಇಬ್ಬರಲ್ಲಿ ಯಾರಾದರೂ ಒಬ್ಬರು ವಿದ್ ಡ್ರಾ ಮಾಡುತ್ತಾರೆ ಎಂದು ಭವಿಷ್ಯ ನುಡಿದ ಅವರು ಹಣದ ಆಟದಲ್ಲಿ ಎಲ್ಲಾ ಮಾಡುತ್ತೇವೆ ಅನ್ನೋರ ಆಟ ದಕ್ಷಿಣಕನ್ನಡದ ಜನ ಮಣೆ ಹಾಕುವುದಿಲ್ಲ ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply