DAKSHINA KANNADA
ಸಂಘಟನೆಯನ್ನು ಬ್ಯಾನ್ ಮಾಡುತ್ತೇವೆ ಅನ್ನೋದು ಹುಚ್ಚುತನದ ಪರಮಾವಧಿ: ಡಿ.ವಿ.ಸದಾನಂದ ಗೌಡ
ಪುತ್ತೂರು, ಮೇ 02: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ರವರು ಸಂಘಟನೆಯನ್ನು ಬ್ಯಾನ್ ಮಾಡುತ್ತೇವೆ ಅನ್ನೋದು ಹುಚ್ಚುತನದ ಪರಮಾವಧಿ ಎಂದು ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ನವರು ಈ ಹಿಂದೆ RSS ಅನ್ನು ನಿಶೇಧಿಸಲು ಹೊರಟಿದ್ದರು, ಆಗ ಅವರ ಗತಿ ಏನಾಯ್ತು ಎಂದು ಎಲ್ಲರಿಗೂ ತಿಳಿದಿದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ರಕ್ಷಣೆ ಮಾಡುತ್ತಿರುವ ಸಂಘಟನೆಯನ್ನು ಬ್ಯಾನ್ ಮಾಡುತ್ತೇವೆ ಅನ್ನೋದು ಹುಚ್ಚುತನದ ಪರಮಾವಧಿ
ದೇಶದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡುವ ಕೆಲಸವನ್ನ ಭಜರಂಗದಳ, ವಿಶ್ವಹಿಂದೂ ಪರಿಷತ್ ನಂತಹ ಸಂಘಟನೆಗಳು ಮಾಡುತ್ತಿದೆ. ಈ ಸಂಘಟನೆಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ, ಅವರು ಅವರ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದಾರೆ.
ಕಾಂಗ್ರೆಸ್ ರಾಜಕಾರಣವನ್ನು ಮಾಡಲಿ ಅದನ್ನು ಬಿಟ್ಟು ಸಂಘಟನೆಗಳನ್ನು ನಿಶೇಧ ಮಾಡಲು ಹೊರಟರೆ ಅವರ ಗುಂಡಿಯನ್ನು ಅವರೇ ತೋಡಿಕೊಂಡ ಹಾಗೆ, ಕಾಂಗ್ರೆಸ್ ಗೆ ಎಚ್ಚರಿಕೆಯನ್ನು ಕೊಡಲು ಇಚ್ಛಿಸುತ್ತೇನೆ, ದೇಶದಲ್ಲಿ ಅಸ್ತಿತ್ವ ಉಳಿಸಬೇಕು ಎಂದಿದ್ದರೆ ಹಿಂದೂ ಸಂಘಟನೆಗಳ ವಿಷಯಕ್ಕೆ ಹೋಗದಿರಿ ಎಂದು ಕಾಂಗ್ರೇಸ್ ಗೆ ಡಿವಿ ಕಿವಿ ಮಾತು ಹೇಳಿದ್ದಾರೆ.