Connect with us

    DAKSHINA KANNADA

    ಈ ಬಾರಿ 130 ಕ್ಕೆ ಒಂದು ಸೀಟ್ ಕೂಡಾ ಕಡಿಮೆಯಾಗುವುದಿಲ್ಲ: ಡಿ.ವಿ.ಸದಾನಂದ ಗೌಡ

    ಪುತ್ತೂರು, ಮೇ 02: ರಾಜ್ಯದ‌ 224 ಕ್ಷೇತ್ರದಲ್ಲೂ ಬಿಜೆಪಿ ಪ್ರಚಾರ ಆರಂಭಿಸಿದ್ದು, ಪ್ರಧಾನಿ ಮೋದಿ ರಾಜ್ಯದಾದ್ಯಂತ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.ಕೋಲಾರ,ಚಿಕ್ಕಬಳ್ಳಾಪುರದಂತಹ ಬಿಜೆಪಿ ಪ್ರಾಬಲ್ಯ ಕಡಿಮೆ ಇರುವ ಪ್ರದೇಶದಲ್ಲೂ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಪುತ್ತೂರಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದ ವಾತಾವರಣ ಬಿಜೆಪಿ ಕಡೆಗಿದೆ. ಮೇ 6 ರಂದು ಪ್ರಧಾನಿ ಮೋದಿ ಬೆಂಗಳೂರಿನಲ್ಲಿ 32 ಕಿಲೋಮೀಟರ್ ರಾಲಿ ನಡೆಸಲಿದ್ದಾರೆ. ಈ ಬಾರಿ 130 ಕ್ಕೆ ಒಂದು ಸೀಟ್ ಕೂಡಾ ಕಡಿಮೆಯಾಗುವುದಿಲ್ಲ.

    ಈ ಗೆಲುವಿನಲ್ಲಿ ಪುತ್ತೂರು ಕೂಡಾ ಸೇರುತ್ತದೆ ಎಂದ ಅವರು ಬಿಜೆಪಿ ಕರ್ನಾಟಕದಲ್ಲಿ ಈ ಬಾರಿ ವಿಶೇಷ ಪ್ರಯೋಗ ಮಾಡಲಿದೆ. ಬಿಜೆಪಿಯ 8 ವರ್ಷದ ರಿಪೋರ್ಟ್ ಕಾರ್ಡು ಜನತೆಯ ಮುಂದೆ ಇಡಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡಾ ಅವರ ರಿಪೋರ್ಟ್ ಕಾರ್ಡನ್ನು ಕೊಡಲಿ‌. ಉತ್ತಮ ಆಡಳಿತ ಮತ್ತು ಅಭಿವೃದ್ಧಿ ನಮ್ಮ ಧ್ಯೇಯ.

    ದೇಶದಲ್ಲಿ ಹೆದ್ದಾರಿ ಕಾಮಗಾರಿಗಳು 24 % ವೇಗದಲ್ಲಿ ನಡೆಯುತ್ತಿದೆ. ಹವಾಯಿ ಚಪ್ಪಲು ಹಾಕಿದವ ವಿಮಾನದಲ್ಲಿ ಹೋಗುವ ವ್ಯವಸ್ಥೆಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಧಿಕಾರಾವಧಿಯ ರಿಪೋರ್ಟ್ ಕಾರ್ಡ್ ಜನತೆಯ ಮುಂದೆ ಇಡಲಿ. ಜನ ಅದರ ಮೌಲ್ಯಮಾಪನ ಮಾಡುತ್ತಾರೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply