Connect with us

BANTWAL

ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಉಪಾಧ್ಯಕ್ಷ ಜಿ.ಅನಂದ ನಿಧನ

ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಉಪಾಧ್ಯಕ್ಷ ಜಿ.ಅನಂದ ನಿಧನ

ಬಂಟ್ವಾಳ ಡಿ.10: ಬಂಟ್ವಾಳದ ಹಿರಿಯ ಬಿಜೆಪಿ ಮುಖಂಡ ದಕ್ಷಿಣ ಕನ್ನಡ ಬಿಜೆಪಿಯ ಉಪಾಧ್ಯಕ್ಷ ಜಿ ಅನಂದಣ್ಣ ಮಂಗಳವಾರ ಮುಂಜಾನೆ ನಿಧನ ಹೊಂದಿದ್ದಾರೆ.

ವ್ರತ್ತಿಯಲ್ಲಿ ಟೈಲರ್ ಉದ್ಯಮ ನಡೆಸುತ್ತಿದ್ದ ಜಿ ಅನಂದಣ್ಣ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕರಾಗಿದ್ದು, 1970ರ ದಶಕದ ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ಹೋರಾಟಕ್ಕೆ ದುಮುಕಿ ಸಮಾಜಕ್ಕೆ ಪ್ರೇರಣೆಯನ್ನು ನೀಡಿದರು. ಜನ ಸಂಘದ ಮೂಲಕ ರಾಜಕಾರಣಕ್ಕೆ ದುಮುಕಿ ಬಂಟ್ವಾಳ ತಾಲೂಕಿನ ಕಕ್ಕೆ ಪದವಿನಿಂದ ಮಂಗಳೂರಿನ ಗುರುಪುರದವರೆಗೆ ಲ್ಯಾಂಬಿ ಸ್ಕೂಟರ್ ನಲ್ಲಿ ಸಂಚರಿಸಿ ಭಾರತೀಯ ಜನತಾ ಪಕ್ಷವನ್ನು ಸಂಘಟಿಸಿದ ಇವರು ಎರಡು ಬಾರಿ ಬಂಟ್ವಾಳ ಪುರಸಭೆಯ ಸದಸ್ಯರಾಗಿ ಜವಬ್ದಾರಿ ನಿರ್ವಹಿಸಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಭದ್ರ ತಳಪಾಯಕ್ಕೆ ಬೆವರು ಸುರಿಸಿದ ಅಗ್ರಪಂಕ್ತಿಯ ನಾಯಕರಾಗಿದ್ದರು. ಬಿಜೆಪಿ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಎರಡು ಅವಧಿಯಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ ಇವರು ಅಸಂಖ್ಯಾತ ಕಾರ್ಯಕರ್ತರನ್ನು ನಾಯಕರನ್ನಾಗಿ ಜನಪ್ರತಿನಿಧಿಗಳಾಗಿ ಬೆಳೆಸಿದ್ದರು.

ದಕ್ಷಿಣ ಕನ್ನಡ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಸ್ತುತ ಜವಬ್ದಾರಿ ನಿರ್ವಹಿಸುತ್ತಿದ್ದ ಅನಂದಣ್ಣ ಮೂರು ಅವಧಿಯಲ್ಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ಅನುಪಮವಾದ ಸೇವೆ ಸಲ್ಲಿಸಿದ ಹಿರಿಯ ಚೇತನ ಬಾಳ ಯಾನ ಮುಗಿಸಿದ್ದಾರೆ .

Facebook Comments

comments