Connect with us

    LATEST NEWS

    ಪಟ್ಲ ಸತೀಶ್ ಶೆಟ್ಟಿ ಗೇಟ್ ಪಾಸ್ ಪ್ರಕರಣ ಸಂಧಾನಕ್ಕೆ ಹೈಕೋರ್ಟ್ ಪೀಠ ಸೂಚನೆ

    ಪಟ್ಲ ಸತೀಶ್ ಶೆಟ್ಟಿ ಗೇಟ್ ಪಾಸ್ ಪ್ರಕರಣ ಸಂಧಾನಕ್ಕೆ ಹೈಕೋರ್ಟ್ ಪೀಠ ಸೂಚನೆ

    ಮಂಗಳೂರು ಡಿ.10: ಕಟೀಲು ಯಕ್ಷಗಾನ ಮೇಳದಿಂದ ಭಾಗವತ ಪಟ್ಲ ಸತೀಶ್ ಶೆಟ್ಟಿ ಗೇಟ್ ಪಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಧಾನ ಪ್ರಕ್ರಿಯೆ ಮೂಲಕ ವಿವಾದ ಇತ್ಯರ್ಥಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

    ಕಟೀಲು ಮೇಳದಿಂದ ಏಕಾಏಕಿ ಹೊರಹಾಕಿದ್ದಕ್ಕೆ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೈಕೋರ್ಟ ಮೆಟ್ಟಿಲೇರಿದ್ದರು. ಸೋಮವರಾ ಈ ಪ್ರಕರಣದ ವಿಚಾರಣೆಯಲ್ಲಿ ಹೈಕೋರ್ಟ್ ನಲ್ಲಿ ಏಕಸದಸ್ಯ ಪೀಠ ಕೈಗೆತ್ತಿಕೊಂಡಿತು.

    ದೂರಿನ ವಿಚಾರಣೆ ನಡೆಸಿದ ನ್ಯಾಯಪೀಠ ಈ ವಿಚಾರವನ್ನು ಸಂಧಾನ ಮೂಲಕ ಇತ್ಯರ್ಥಗೊಳಿಸಲು ಇಂಗಿತ ವ್ಯಕ್ತಪಡಿಸಿದ್ದು, ಡಿಸೆಂಬರ್ 12 ರ ಒಳಗೆ ತನ್ನ ಸಮ್ಮುಖದಲ್ಲಿ ಸಂಧಾನ ಪ್ರಕ್ರಿಯೆ ನಡೆಸುವಂತೆ ಸೂಚನೆ ನೀಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply