Connect with us

LATEST NEWS

ಹ್ಯಾಕರ್ ಗಳಿಂದ 20 ಲಕ್ಷ ರೂಪಾಯಿ ಕಳೆದುಕೊಂಡ ಸಂಸದೆ ಶೋಭಾ ಕರಂದ್ಲಾಜೆ

ಹ್ಯಾಕರ್ ಗಳಿಂದ 20 ಲಕ್ಷ ರೂಪಾಯಿ ಕಳೆದುಕೊಂಡ ಸಂಸದೆ ಶೋಭಾ ಕರಂದ್ಲಾಜೆ

ಮಂಗಳೂರು ಫೆಬ್ರವರಿ 13: ಬ್ಯಾಂಕ್ ಖಾತೆಗಳಿಗೆ ಆನ್ ಲೈನ್ ಹ್ಯಾಕರ್ ಗಳ ಕಾಟ ವೀಪರೀತ ಹೆಚ್ಚಾಗಿದ್ದು, ಈ ಬಾರಿ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹ್ಯಾಕರ್ ಗಳ ಬಲೆ ಬಿದ್ದು ಬರೋಬ್ಬರಿ 20 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ದೆಹಲಿ ಪಾರ್ಲಿಮೆಂಟ್​ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 20 ಲಕ್ಷ ರೂ. ಕಳವು ಮಾಡಿದ್ದಾರೆ. ಸಂಸದೆ ಶೋಭಾ ಅವರು ಮೊಬೈಲ್​​ನಿಂದ ತಮ್ಮ ನೆಟ್​ ಬ್ಯಾಂಕಿಂಗ್​ ಖಾತೆಯನ್ನು ನಿರ್ವಹಿಸುವಾಗ ಹ್ಯಾಕ್​ ಮಾಡಿ ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ.

ವೃತ್ತಿಪರ ಹ್ಯಾಕರ್​ಗಳು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಅಕೌಂಟ್​ ಹ್ಯಾಕ್ ಮಾಡಿ 20 ಲಕ್ಷ ರೂ. ಕಳವು ಮಾಡಿರುವ ಘಟನೆ 4 ದಿನಗಳ ಹಿಂದೆ ನಡೆದಿದ್ದು, ಮಂಗಳವಾರ ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಸಂಸದೆ ಶೋಭಾ ಅವರು ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *