ತಲಪಾಡಿ ಉದ್ಯಮಿಯ ಮನೆಯಲ್ಲಿ ಅನಾಥ ಬಾಲಕಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ : ತನಿಖೆಗೆ ಆಗ್ರಹ

ಮಂಗಳೂರು, ಫೆಬ್ರವರಿ 13 : ಮಂಗಳೂರು ನಗರದ ಹೊರ ವಲಯದ ತಲಪಾಡಿಯಉದ್ಯಮಿಯೊಬ್ಬರ ಮನೆಯಲ್ಲಿ ನೇತು ಹಾಕಿದ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಸುಮಾರು 14 ವರ್ಷ ವಯಸ್ಸಿಯ ಈ ಬಾಲಕಿಯ ಶವದ ಸುತ್ತಾ ಅನುಮಾನದ ಹುತ್ತ ಬೆಳೆಯಲಾರಂಭಿಸಿದೆ.
ದೆಹಲಿ ಮೂಲದ ರೇಶ್ಮಾ ಎಂಬ 14 ವರ್ಷದ ಬಾಲಕಿಯನ್ನು ವಿದೇಶದಲ್ಲಿ ಇರುವ ಇಲ್ಲಿನ ದಂಪತಿಗಳು ಸಾಕಲು ತಂದಿದ್ದರು ಎನ್ನಲಾಗಿದೆ.

ಅವರು ವಿದೇಶಕ್ಕೆ ಹೋದ ನಂತರ ಈಕೆ ಇಲ್ಲಿ ವಾಸವಿದ್ದ ಅವರ ಸಂಬಂಧಿಕರ ಜೊತೆ ಕೆಲಸಕ್ಕೆ ಇದ್ದಳು ಎನ್ನಲಾಗುತ್ತಿದೆ.

ದೆಹಲಿ ಮೂಲದ ಈಕೆಯನ್ನು ಇಲ್ಲಿ ಕೆಲಸಕ್ಕೆ ಕರೆತಂದವರು ಯಾರು ? ಎನ್ನುವ ಬಗ್ಗೆ ತನಿಖೆಯಾಗಬೇಕು ಏದು ಡಿವೈಎಫ್ ಐ ಆಗ್ರಹಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಡಿವೈಎಫ್ಐ ತಲಪಾಡಿ ಘಟಕದ ಸಂಚಾಲಕ ಅಶ್ರಫ್ ಕೆ ಸಿ ರೋಡ್ ಯಾರೂ ಇಲ್ಲದ ಈ ಅನಾಥ ಬಾಲಕಿಯ ಸಾವಿನ ಬಗ್ಗೆ ಇಲ್ಲಿನ ಜನರಲ್ಲಿ ಹಲವು ಸಂಶಯಗಳಿದ್ದು

ಪೊಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಿ ಸಂಶಯ ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

3 Shares

Facebook Comments

comments