ಪೇಜಾವರ ಶ್ರೀಗಳಿಗೆ ಶ್ರೀನಿವಾಸ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್

ಮಂಗಳೂರು ಫೆಬ್ರವರಿ 13: ಉಡುಪಿ ಪೇಜಾವರ ಮಠದ ಮಠಾಧೀಶ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ಶ್ರೀನಿವಾಸ ವಿಶ್ವವಿದ್ಯಾಲಯ ಕೊಡಮಾಡುವ ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಿದೆ.

ಶಿಕ್ಷಣ, ಅಧ್ಯಾತ್ಮ ಮತ್ತು ಸಾಮಾಜಿಕ ಸುಧಾರಣೆಗೆ ಜೀವಿತಾವಧಿ ನೀಡಿದ ಕೊಡುಗೆಗೆ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರನ್ನು ಶ್ರೀನಿವಾಸ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಿದೆ.

ಫೆಬ್ರವರಿ 15ರಂದು ಶ್ರೀನಿವಾಸ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭ ನಡೆಯಲಿದ್ದು, ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಉಪಕುಲಪತಿ ಡಾ.ಎಸ್.ಸಚ್ಚಿದಾನಂದ ಪದವೀಧರರು ಮತ್ತು ರಾಂಕ್ ವಿಜೇತರಿಗೆ ಪ್ರಮಾಣ ಪತ್ರ ವಿತರಿಸುವರು.

ಮೊದಲ ಬಾರಿಗೆ ಶ್ರೀನಿವಾಸ ಬಳಗದ ಎಲ್ಲ 13 ಸಂಸ್ಥೆಗಳು ಒಗ್ಗೂಡಿ ಸಂಸ್ಥಾಪಕರ ದಿನ ಆಚರಿಸುತ್ತಿದ್ದು, ಇದು ಸಂಸ್ಥೆಯ ಏಕೀಕತ ಸಾಂಸ್ಥಿಕ ಗುರುತನ್ನು ತೋರಿಸಲಿದೆ.

1 Shares

Facebook Comments

comments