LATEST NEWS
ಟಿಎಂಸಿ ಸೇರಿದ ಪತ್ನಿ ಡೈವೋರ್ಸ್ ಕೊಡಲು ಮುಂದಾದ ಬಿಜೆಪಿ ಸಂಸದ….!
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಟಿಎಂಸಿಯ ಅನೇಕ ನಾಯಕರು ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಮಮತಾ ಬ್ಯಾನರ್ಜಿಗೆ ಶಾಕ್ ನೀಡಿದ್ದರು. ಆದರೆ ಇದೀಗ ಬಿಜೆಪಿ ಶಾಕ್ ಗೆ ಒಳಗಾಗುವ ಸರದಿ ಬಂದಿದ್ದು, ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಸೌಮಿತ್ರ ಖಾನ್ ಅವರ ಪತ್ನಿ ಸುಜಾತಾ ಮೊಂಡಲ್ ಖಾನ್, ಟಿಎಂಸಿ ಪಕ್ಷಕ್ಕೆ ಸೇರ್ಪಡೆಗೊಂಡು ಎಲ್ಲರ ಹುಬ್ಬೇರಿಸಿದ್ದಾರೆ.
ಪಶ್ಚಿಮ ಬಂಗಾಳದ ಬಿಶನ್‌ಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸೌಮಿತ್ರ ಖಾನ್ ಅವರ ಪತ್ನಿ ಸುಜಾತಾ ಮೊಂಡಲ್ ಖಾನ್ ಟಿಎಂಸಿ ಸೇರಿದ್ದು, ಇದರಿಂದ ಇಬ್ಬರ ಸಂಬಂಧದಲ್ಲೂ ಬಿರುಕು ಮೂಡಿದೆ. ಪತ್ನಿ ನಡೆಯಿಂದ ಕುಪಿತರಾಗಿರುವ ಬಿಜೆಪಿ ಸಂಸದ ಸೌಮಿತ್ರ ಖಾನ್, ಪತ್ನಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ. ನನ್ನ ಆಜ್ಞೆ ಮೀರಿ ಟಿಎಂಸಿಗೆ ಸೇರ್ಪಡೆಗೊಂಡಿರುವ ಸುಜಾತಾ ಅವರಿಗೆ ವಿಚ್ಛೇದನ ನೀಡುವುದಾಗಿ ಸೌಮಿತ್ರ ಸ್ಪಷ್ಟಪಡಿಸಿದ್ದಾರೆ.
ಆಕೆಯ ನಿರ್ಧಾರ ನಮ್ಮ 10 ವರ್ಷಗಳ ಸಂಬಂಧವನ್ನು ಮುರಿದಿದ್ದು, ಪತ್ನಿಯನ್ನು ತ್ಯಜಿಸಿ ನಾನು ರಾಜ್ಯದಲ್ಲಿ ಬಿಜೆಪಿಯನ್ನು ಮತ್ತಷ್ಟು ಗಟ್ಟಿಯಾಗಿ ಬೇರೂರುವಂತೆ ಮಾಡಲು ದುಡಿಯುತ್ತೇನೆ ಎಂದು ಸೌಮಿತ್ರ ಸ್ಪಷ್ಟಪಡಿಸಿದ್ದಾರೆ. ಇನ್ನು ಟಿಎಂಸಿ ಸೇರ್ಪಡೆಯ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸುಜಾತಾ ಖಾನ್, ಪತಿ ಗೆಲುವಿಗೆ ಹಾಗೂ ಬಿಜೆಪಿಗಾಗಿ ಸಾಕಷ್ಟು ದುಡಿದಿದ್ದೇನೆ. ಆದರೆ ನನಗೆ ಮನೆಯಲ್ಲೂ ಹಾಗೂ ಪಕ್ಷದಲ್ಲೂ ಗೌರವ ಸಿಗಲಿಲ್ಲ. ಹೀಗಾಗಿ ಟಿಎಂಸಿ ಸೇರುವ ನಿರ್ಧಾರ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
Facebook Comments
You may like
-
ನೂತನ ಸಚಿವರಿಗೆ ಖಾತೆ ಹಂಚಿಕೆ..ನೂತನ ಸಚಿವ ಅಂಗಾರರಿಗೆ ಮೀನುಗಾರಿಕೆ
-
ಕಾರು, ವ್ಯಾನ್ ಮೇಲೆ ಉರುಳಿ ಬಿದ್ದ ಕಲ್ಲು ತುಂಬಿದ್ದ ಟ್ರಕ್ – 13 ಮಂದಿ ಸಾವು
-
ಶಾಸಕ ಯತ್ನಾಳ್ ಬಾಯಿ ಮುಚ್ಚದಿದ್ದರೆ ಕೇಂದ್ರ ನಾಯಕರಿಂದ ಸೂಕ್ತ ಕ್ರಮ – ಡಿವಿ ಸದಾನಂದ ಗೌಡ
-
ಒಂದೆರಡು ದಿನಗಳಲ್ಲಿ ಎಲ್ಲಾ ಭಿನ್ನಮತ ಶಮನ – ಬಿವೈ ರಾಘವೇಂದ್ರ
-
ಅಣ್ಣಾಮಲೈಯವರ ಅನುಭವದ ಬುತ್ತಿ ‘ಸ್ಟೆಪ್ಪಿಂಗ್ ಬಿಯಾಂಡ್ ಖಾಕಿ’ 18ರಂದು ಬಿಡುಗಡೆ
-
ಕೊರೊನಾ ಲಸಿಕೆ ವಿಚಾರದಲ್ಲೂ ಅಪಪ್ರಚಾರ ಮಾಡುತ್ತಿರುವುದು ದುರ್ದೈವ ಸಂಗತಿ
You must be logged in to post a comment Login