Connect with us

LATEST NEWS

ಉದ್ಯಮಿ ಕೊಲೆ ಮಾಡಲು ಬಂದ ಸುಪಾರಿ ಕಿಲ್ಲರ್ ಗಳಿಂದ ಹೊಟೇಲ್ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ

ಜೈಪುರ: ಉದ್ಯಮಿಯೋರ್ವನನ್ನು ಕೊಲೆಗೈಯ್ಯಲು ಸ್ಟಾರ್ ಹೊಟೆಲ್ ಗೆ ಬಂದಿದ್ದ ಸುಪಾರಿ ಕಿಲ್ಲರ್ಸ್ ಹೊಟೆಲ್ ನ ಮಹಿಳಾ ಸಿಬ್ಬಂದಿಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.


ರಾಜಸ್ಥಾನದ ನೀಮಾನಾದಲ್ಲಿ ಈ ಘಟನೆ ನಡೆದಿದ್ದು, ಮೂಲಗಳ ಪ್ರಕಾರ ಇಲ್ಲಿನ ಐಶಾರಾಮಿ ಹೊಟೆಲ್ ವೊಂದಕ್ಕೆ ಆಗಮಿಸಿದ್ದ ಐವರು ದುಷ್ಕರ್ಮಿಗಳು ಕೊಠಡಿಯನ್ನು ಪಡೆದಿದ್ದಾರೆ. ಈ ವೇಳೆ ರೂಮ್ ಕೀಯನ್ನು ತೆಗೆದುಕೊಂಡ ದುಷ್ಕರ್ಮಿಗಳು ಕೆಲವೇ ಕ್ಷಣಗಳಲ್ಲಿ ರಿಸಪ್ಷನ್ ಗೆ ಕರೆ ಮಾಡಿ ಸೆಕ್ಸ್ ವರ್ಕರ್ ಗಳನ್ನು ರೂಮ್‌ಗೆ ಕಳುಹಿಸುವಂತೆ ಹೇಳಿದ್ದಾರೆ. ಇದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಆರೋಪಿಗಳು ನೇರವಾಗಿ ಮಹಿಳಾ ಸಿಬ್ಬಂದಿ ಮಲಗಿದ್ದ ಕೋಣೆ ಕಡೆಗೆ ಹೋಗಿದ್ದಾರೆ. ಇಬ್ಬರು ಒಳಗೆ ಹೋಗಿದ್ದಾರೆ. ಮೂವರು ಹೊರಗೆ ಕಾವಲು ಕಾಯಲು ನಿಂತಿದ್ದಾರೆ. ಒಳಗೆ ಹೋದ ಆರೋಪಿಗಳು ಮಹಿಳಾ ಸಿಬ್ಬಂದಿಗಳಿಗೆ ಪಿಸ್ತೂಲು ತೋರಿಸಿ, ಇಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ. ಕೂಡಲೇ ಎಚ್ಚೆತ್ತ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.

ಪೊಲೀಸರ ವಿಶೇಷ ತಂಡ ಸ್ಥಳಕ್ಕೆ ಬಂದು ಮಹಿಳಾ ಸಿಬ್ಬಂದಿಯನ್ನು ರಕ್ಷಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನರೇಶ್ ಗುಜ್ಜರ್, ಲೋಕೇಶ್, ರಾಹುಲ್, ದನ್ವೇರ್ ಮತ್ತು ಪ್ರಿನ್ಸ್ ತಿವಾರಿ ಎಂದು ಗುರುತಿಸಲಾಗಿದೆ.ಈ ವೇಳೆ ವಿಚಾರಣೆ ನಡೆಸಿದ ಪೊಲೀಸರಿಗೆ ದುಷ್ಕರ್ಮಿಗಳು ಸ್ಫೋಟಕ ಮಾಹಿತಿ ನೀಡಿದ್ದು, ತಾವು ಓರ್ವ ಉದ್ಯಮಿಯನ್ನು ಹತ್ಯೆ ಮಾಡುವ ಸಲುವಾಗಿ ಬಂದಿದ್ದಾಗಿ ತಿಳಿಸಿದ್ದಾರೆ. ಹತ್ಯೆ ಮಾಡದೇ ಇರಲು ಉದ್ಯಮಿಗೆ 20 ಲಕ್ಷ ರೂ ನೀಡುವಂತೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ. ಈ ಐವರು ಆರೋಪಿಗಳಲ್ಲಿ ಒಬ್ಬನಾದ ನರೇಶ್ ಈಗಾಗಲೇ ಒಂದು ಕೊಲೆ ಆರೋಪವನ್ನು ಹೊತ್ತಿದ್ದು, ಪೆರೋಲ್ ಮೇಲೆ ಜೈಲಿನಿಂದ ಹೊರಗಡೆ ಬಂದಿದ್ದ.

Facebook Comments

comments