LATEST NEWS
ಬಿ.ಜೆ.ಪಿ ಕೇರಳ ರಾಜ್ಯ ಕಾರ್ಯಾಲಯದ ಮೇಲೆ ದುಷ್ಕರ್ಮಿಗಳ ದಾಳಿ, ಕೂದಲೆಳೆಯ ಅಂತರದಲ್ಲಿ ಪಾರಾದ ರಾಜ್ಯಾಧ್ಯಕ್ಷ
ತಿರುವನಂತಪುರಂ, ಜುಲೈ 28 : ಬಿ.ಜೆ.ಪಿ ಕೇರಳ ರಾಜ್ಯ ಕಾರ್ಯಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರ ವಾಹನ ಸೇರಿದಂತೆ,ಆರಕ್ಕೂ ವಾಹನಗಳು ದುಷ್ಕರ್ಮಿಗಳ ದಾಳಿಗೆ ಹಾನಿಗೊಳಗಾಗಿವೆ. ಕಲ್ಲು ತೂರಾಟ ಕೂಡ ನಡೆದಿದ್ದು ಕಚೇರಿಯ ಗಾಜುಗಳು ಒಡೆದುಹೋಗಿವೆ. ಬಿ.ಜೆ.ಪಿ ರಾಜ್ಯಾಧ್ಯಕ್ಷರು ಈ ಸಂದರ್ಭದಲ್ಲಿ ಪಕ್ಷದ ಕಚೇರಿಯಲ್ಲೇ ಇದ್ದರೂ ಕೂದಲೆಳೆಯಂತರದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಿ.ಪಿ.ಐ ಎಂ ಅಂಗ ಸಂಘಟನೆಯಾದ ಡಿವೈ ಎಫ್ ಐ ರಾಜ್ಯ ಸಮಿತಿ ಸದಸ್ಯ ಎ.ಪಿ. ಬಿನು ಹಾಗೂ ಎಸ್ ಎಫ್ ಐ ಜಿಲ್ಲಾ ಕಾರ್ಯದರ್ಶಿ ಪ್ರಜಿತ್ ನ ನೇತೃತ್ವದಲ್ಲಿ ಆಕ್ರಮಣ ನಡೆಸಲಾಗಿದೆ ಆರೋಪಿಸಲಾಗಿದ್ದು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಇದೀಗ ಪಕ್ಷದ ಕಚೇರಿಗೆ ಬಿಗಿ ಪೋಲಿಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.
ದಾಳಿಯ ಸಿ ಸಿಟಿವಿ ಫೂಟೇಜ್ ವಿಡಿಯೋಗಾಗಿ ಲಿಂಕನ್ನು ಒತ್ತಿರಿ..
You must be logged in to post a comment Login