ಪುತ್ತೂರು ತಾಲೂಕಿನ ಸುತ್ತಮುತ್ತ ಕಾಡುಕೋಣ ಹಾವಳಿ

ಪುತ್ತೂರು ನವೆಂಬರ್ 22: ದಕ್ಷಿಣಕನ್ನಡ ಜಿಲ್ಲೆಯ ಕಾಡಿನಂಚಿನಲ್ಲಿರುವ ಗ್ರಾಮಗಳಲ್ಲಿ ಇದೀಗ ಕಾಡು ಕೋಣಗಳ ಹಾವಳಿ ಹೆಚ್ಚಾಗುತ್ತಿವೆ. ಅದರಲ್ಲೂ ಪುತ್ತೂರು ತಾಲೂಕಿನ ಸುಳ್ಯಪದವು, ಪಾಣಾಜೆ ಮೊದಲಾದ ಪ್ರದೇಶಗಳಲ್ಲಿ ಕಾಡುಕೋಣಗಳ ಹಿಂಡು ಕೃಷಿಕನ ತೋಟಗಳಿಗೆ ಲಗ್ಗೆಯಿಡುತ್ತಿದೆ.

ರಾತ್ರಿ ಹಗಲೆನ್ನದೆ ಕೃಷಿತೋಟಗಳಿಗೆ ನುಗ್ಗುವ ಕಾಡುಕೋಣಗಳಿಂದ ಕೃಷಿಕರಿಗೆ ಇದೀಗ ತೋಟಗಳಿಗೆ ಹೋಗಲೂ ಅಂಜಿಕೆಯಾಗುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ ರಸ್ತೆಯ ಬದಿಗೂ ಬರುತ್ತಿರುವ ಈ‌ ಕೋಣಗಳನ್ನು‌ ನಿಯಂತ್ರಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕೆನ್ನುವ ಒತ್ತಾಯವೂ ಈ ಭಾಗದ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

VIDEO

Facebook Comments

comments