ಚೆನೈನ ರೈಲ್ವೆ ನಿಲ್ದಾಣದಲ್ಲಿ 1,100 ಕೆಜಿ ಶಂಕಿತ ನಾಯಿ ಮಾಂಸ ಪತ್ತೆ

ಮಂಗಳೂರು ನವೆಂಬರ್ 22: ಚೆನ್ನೈ ನ ಎಗ್ಮೋರ್ ರೈಲು ನಿಲ್ದಾಣದಲ್ಲಿ 11 ಪೆಟ್ಟಿಗೆಗಳಲ್ಲಿ 1,100 ಕೆಜಿ ಶಂಕಿತ ನಾಯಿ ಮಾಂಸವನ್ನು ತಮಿಳುನಾಡು ಆಹಾರ ಸುರಕ್ಷತಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಚೆನ್ನೈನ ಎಗ್ಮೋರ್ ರೈಲ್ವೆ ನಿಲ್ದಾಣದಲ್ಲಿ ತಪಾಸಣೆಯ ಸಂದರ್ಭ ರೈಲ್ವೆ ಪೊಲೀಸ್ ಸಿಬ್ಬಂದಿಗಳ ಕಣ್ಣಿಗಿ ಈ ಪೆಟ್ಟಿಗೆಗಳನು ಬಿದ್ದಿವೆ. ಪ್ಲಾಟ್ ಫಾರ್ಮ್ ಸಂಖ್ಯೆ 5 ರಲ್ಲಿ ಇರಿಸಲಾಗಿರುವ ಕೆಲವು ಪೆಟ್ಟಿಗೆಗಳಿಂದ ಒಂದು ರೀತಿಯ ವಾಸನೆ ಬರುತ್ತಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಪೆಟ್ಟಿಗೆಗಳನ್ನು ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ರೈಲ್ವೆ ಪೊಲೀಸ್ ಅಧಿಕಾರಿಗಳ ಈ ಬಗ್ಗೆ ವಿಚಾರಣೆ ನಡೆಸಿದಾಗ ಪೆಟ್ಟಿಗೆಗಳನ್ನು ತಂದ ಆರೋಪಿಗಳು ಪೆಟ್ಟಿಗೆಗಳನ್ನು ಬಿಟ್ಟು ನಿಲ್ದಾಣದಿಂದ ಪಲಾಯಾನ ಮಾಡಿದ್ದಾರೆ.

ತರ ರೈಲ್ವೆ ಪೊಲೀಸ್ ಸಿಬ್ಬಂದಿ ರಾಜ್ಯ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಈ ಕುರಿತಂತೆ ಮಾಹಿತಿ ತಿಳಿಸಿದರು, ಆಹಾರ ಸುರಕ್ಷತಾ ಅಧಿಕಾರಿಗಳು ಬಂದು ತಪಾಸಣೆ ನಡೆಸಿದಾಗ ಉತ್ಪನ್ನವನ್ನು ನಾಯಿ ಮಾಂಸವೆಂದು ಶಂಕಿಸಲಾಗಿದ್ದು, ಮುಂದಿನ ಪರೀಕ್ಷೆಯಾಗಿ ಮಾಂಸದ ಮಾದರಿಗಳನ್ನು ಮದ್ರಾಸ್ ಪಶುವೈದ್ಯಕೀಯ ಕಾಲೇಜ್ ಗೆ ಕಳುಹಿಸಲಾಗಿದೆ.

ವರದಿಯ ಪ್ರಕಾರ, ಪಾರ್ಸೆಲ್ಗಳನ್ನು ಆರಂಭದಲ್ಲಿ ಗುಜರಾತ್ ನ ಗಾಂಧಿಧಾಮದಲ್ಲಿ ಬುಕ್ ಮಾಡಲಾಗಿದೆ.

2 Shares

Facebook Comments

comments