Connect with us

LATEST NEWS

ಕೋಟ – ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಓರ್ವ ಸಾವು – ಇಬ್ಬರು ಗಂಭೀರ

ಕೋಟ ಎಪ್ರಿಲ್ 5: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕೋಟದ ಮಣೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.


ಮೃತರನ್ನು ಪ್ರಸನ್ನ ದೇವಾಡಿಗ ಎಂದು ಗುರುತಿಸಲಾಗಿದೆ. ಕೋಟ ಮಣೂರು ಬೊಬ್ಬರ್ಯಕಟ್ಟೆ ಸಮೀಪ ರಸ್ತೆಯಲ್ಲಿ ಇಚರ್ ವಾಹನ ಕೆಟ್ಟು ನಿಂತಿದ್ದು, ಇದೇ ಸಂದರ್ಭ ಕೋಟದಿಂದ ಕುಂಭಾಶಿ ಕಡೆಗೆ ಚಲಿಸುತ್ತಿದ್ದ ಮೂವರು ಬೈಕ್ ಸವಾರರು ಮುಂದೆ ತೆರಳುತ್ತಿದ್ದ ಬಸ್ ನಡುವೆ ಕೆಟ್ಟು ನಿಂತ ಇಚರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಓರ್ವ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾನೆ.


ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Click to comment

You must be logged in to post a comment Login

Leave a Reply